ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಅಂಗವಾಗಿ ವಿಷುಕಣಿ ಉತ್ಸವ ಶನಿವಾರ ಜರುಗಿತು. ನೆರೆಯ ದ.ಕ, ಕಣ್ಣೂರು ಜಿಲ್ಲೆಗಳಿಂದ ಭಾರಿ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು. ಬೆಳಗ್ಗೆ 4ರಿಂದಲೇ ಭಕ್ತಾದಿಗಳು ಬರಲಾರಂಭಿಸಿದ್ದರು. ಬೆಳಗ್ಗೆ ವಿಷುಕಣಿಯೊದಿಗೆ ಶ್ರೀ ದೇವರ ವಿಷುಕಣಿ ವಿಶೇಷ ಬಲಿ ಉತ್ಸವ ನಡೆಯಿತು. ನಂತರ ರಾಜಾಂಗಣ ಪ್ರಸಾದ, ಪಂಚವಾದ್ಯ ನಡೆಯಿತು.
ಇಂದು ನಡುದೀಪೋತ್ಸವ:
16ರಂದು ನಡುದೀಪೋತ್ಸವ ಅಂಗವಾಗಿ ಬೆಳಗ್ಗೆ 5ಕ್ಕೆ ದೀಪೋತ್ಸವ, ಉತ್ಸವ ಬಲಿ, ಸಂಜೆ 7ಕ್ಕೆ ನಡುದೀಪೋತ್ಸವ, ಸೇವೆ ಸುತ್ತುಗಳು ನಡೆಯುವುದು. 17ರಂದು ಬೆಳಗ್ಗೆ 5ಕ್ಕೆ ಉತ್ಸವ ಬಲಿ, ಸಂಜೆ 6.30ಕ್ಕೆ ಮೂಲಸ್ಥಾನ ಉಳಿಯತ್ತಡ್ಕಕ್ಕೆ ಶ್ರೀದೇವರ ಘೋಷಯಾತ್ರೆ, ಮೂಲಸ್ಥಾನ ಉಳಿಯತ್ತಡ್ಕದಲ್ಲಿ ಕಟ್ಟೆಪೂಜೆ, ರಾತ್ರಿ 10ಕ್ಕೆ ಮಧೂರು ಬೆಡಿಕಟ್ಟೆಯಲ್ಲಿ ಕಟ್ಟೆಪೂಜೆ, ಸಾಂಪ್ರದಾಯಕ ಸುಡುಮದ್ದು ಪ್ರದರ್ಶನ, ಶಯನ ನಡೆಯುವುದು.
ಮಧೂರಿನಲ್ಲಿ ಸಂಭ್ರಮದ ವಿಷು ಕಣಿ ಉತ್ಸವ
0
ಏಪ್ರಿಲ್ 15, 2023