ಪೆರ್ಲ: ಶಿವಾಂಜಲಿ ಕಲಾ ಕೇಂದ್ರ ಪೆರ್ಲ ಇದರ ನೇತೃತ್ವದಲ್ಲಿ ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ (ಉಳ್ಳಾಲ್ತಿ) ವಿಷ್ಣುಮೂರ್ತಿ ಕ್ಷೇತ್ರದ ಅನ್ನಪೂರ್ಣ ಸಭಾಂಗಣದಲ್ಲಿ ನಡೆದ ಎರಡು ದಿನಗಳ ಭರತನಾಟ್ಯ ಕಾರ್ಯಾಗಾರ ಸಂಪನ್ನಗೊಂಡಿತು.
ನಾಟ್ಯಾರಾಧನ ಕಲಾ ಕೇಂದ್ರ ಉರ್ವ ಮಂಗಳೂರು ನಿರ್ದೇಶಕಿ ವಿದುಷಿ ಸುಮಂಗಲ ರತ್ನಾಕರ ರಾವ್ ಅವರು ಕಾರ್ಯಾಗಾರ ನಡೆಸಿಕೊಟ್ಟರು. ಅವರು ಬರೆದ ಪದಮ್ ಹಾಗು ಅವರ ರಚನೆಯ ಜತಿಸ್ವರ ವಿದ್ಯಾರ್ಥಿಗಳಿಗೆ ಕಲಿಸಿದರು. ಇದೇ ಸಂದರ್ಭದಲ್ಲಿ ಸುಮಂಗಲ ರತ್ನಾಕರ ರಾವ್ ಅವರನ್ನು ಶಿವಾಂಜಲಿ ಕಲಾಕೇಂದ್ರದ ಕಾರ್ಯದರ್ಶಿ ವೆಂಕಟೇಶ ಭಟ್ ಮತ್ತು ದೇವಿಕಾ ಭಟ್ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸಮ್ಮಾನಿಸಿ ಗೌರವಿಸಿದರು. ಸಾಂಸ್ಕøತಿಕ ಸಂಘಾಟಕ ಗುರುಪ್ರಸಾದ್ ಕೋಟೆಕಣಿ, ಶಿವಾಂಜಲಿ ಕಲಾಕೇಂದ್ರದ ನಿರ್ದೇಶಕಿ ವಿದುಷಿ ಕಾವ್ಯಾ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಭಟ್ ಸ್ವಾಗತಿಸಿ, ಹೇಮವಾಣಿ ವಂದಿಸಿದರು. ಶಿಲ್ಪಾ ಸುದರ್ಶನ್ ಕಾರ್ಯಕ್ರಮ ನಿರೂಪಿಸಿದರು.
ಪೆರ್ಲದಲ್ಲಿ ಭರತನಾಟ್ಯ ಕಾರ್ಯಾಗಾರ ಸಂಪನ್ನ
0
ಏಪ್ರಿಲ್ 12, 2023