ಪೆರ್ಲ: ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀದೇವರ ಪಡುಭಾಗಕ್ಕೆ ಸವಾರಿ ಮಂಗಳವಾರ ನಡೆಯಿತು. ವಿವಿಧೆಡೆ ಕಟ್ಟೆಪೂಜೆಗಳ ನಂತರ ಬಜಕೂಡ್ಲು ಸ್ಟೇಡಿಯಂ ವಠಾರದಲ್ಲಿ ಶ್ರೀ ಮಹಾಲಿಂಗೇಶ್ವರ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ವತಿಯಿಮದ ಆಕರ್ಷಕ ಸುಡುಮದ್ದು ಪ್ರದರ್ಶನ ನಡೆಯಿತು. ಬ್ರಹ್ಮಶ್ರೀ ದೇಲಂಪಾಡಿ ಅನಿರುದ್ಧ ತಂತ್ರಿ ನೇತೃತ್ವ ವಹಿಸಿದ್ದರು.
ಇಂದು ಅವಭೃತಸ್ನಾನ:
ಜಾತ್ರಾಮಹೋತ್ಸವದ ಅಂಗವಾಗಿ ಶ್ರೀದೇವರ ಅವಭೃತಸ್ನಾನ, ಧ್ವಜಾವರೋಹಣ ಏ. 6ರಂದು ನಡೆಯಲಿದೆ. ಮಧ್ಯಾಹ್ನ 1.30ಕ್ಕೆ ಶ್ರೀದೇವರ ಬಲಿ, ಕಟ್ಟೆಪೂಜೆ, ಅವಭೃತ ಸ್ನಾನದ ನಂತರ ಶ್ರೀದೇವರ ದರ್ಶನಬಲಿ, ಬಟ್ಟಲು ಕಾಣಿ ನಡೆಯುವುದು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ 2ಗಂಟೆಗೆ ಕೃಷ್ಣಕಿಶೋರ್ ಪೆರ್ಮುಖಮತ್ತು ಬಳಗದವರಿಂದ ಭಜನಾ ಸಂಕೀರ್ತನೆ ನಡೆಯುವುದು. ಈ ಸಂದರ್ಭ ಮನೆ ಮನೆ ಭಜನಾ ಅಭಿಯಾನದ ಉದ್ಘಾಟನೆ ನಡೆಯುವುದು. 7ರಂದು ಬೆಳಗ್ಗೆ 10ರಿಂದ ಹುಲಿಭೂತ ನೇಮ ನಡೆಯುವುದು.
ಬಜಕೂಡ್ಲು ಶ್ರೀಮಹಾಲಿಂಗೇಶ್ವರ ದೇವಸ್ಥಾನ ಜಾತ್ರೆ ಇಂದು ಸಂಪನ್ನ
0
ಏಪ್ರಿಲ್ 06, 2023