ಕಾಸರಗೋಡು: ಕುಂಬಳೆ ಸನಿಹದ ಕಿದೂರು ಅಂಬಿಲಡ್ಕ ಶ್ರೀ ಪೂಮಾಣಿ ಕಿನ್ನಿಮಾಣಿ ರಾಜನ್‍ದೈವ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ಏ. 4ರಂದು ಆರಂಭಗೊಳ್ಳಲಿದೆ. ಜಾತ್ರಾ ಮಹೋತ್ಸವದ ಪೂರ್ವಭಾವಿಯಾಗಿ ಮಾ. 24ರಂದು ಕೋಳಿಕುಂಟ ಕಾರ್ಯಕ್ರಮ ನೆರವೇರಿದ್ದು, ಮೀನಮಾಸ 21ರಿಂದ ವಾರ್ಷಿಕ ಜಾತ್ರಾ ಮಹೋತ್ಸವ ಆರಂಭಗೊಳ್ಳುವುದು ವಾಡಿಕೆಯಾಗಿದೆ.
ಬ್ರಹ್ಮಶ್ರೀ ವೇದಮೂರ್ತಿ ಶಂಕರನಾರಾಯಣ ಕಡಮಣ್ಣಾಯ ಕರ್ಕುಳಬೂಡು ಅವರ ಪೌರೋಹಿತ್ಯದಲ್ಲಿಕ್ಷೇತ್ರಕ್ಕೆ ಸಂಬಂಧಿಸಿದ ವಿಧಿವಿಧಾನ ನಡೆಯುವುದು. ಬಂಬ್ರಾಣ ಯಜಮಾನ ಬಿ. ಮೋಹನದಾಸ ರೈ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುವುದು. ಏ. 4ರಂದು ಸಂಜೆ 6ಕ್ಕೆ ಭಜನಾ ಸಂಕೀರ್ತನ, 7ಕ್ಕೆ ಬಂಬ್ರಾಣ ಮನೆಯಿಂದ ಭಂಡರದ ಆಗಮನ, 7.30ಕ್ಕೆ ಬೆಜಪ್ಪೆ ಭಂಡಾರದ ಮನೆ ಮತ್ತು ಕಿದೂರು ದೇವಸ್ಥಾನದಿಂದ ಭಂಡಾರ(ಕೀರೋಳು) ಆಗಮಿಸುವುದು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 7ಕ್ಕೆ ನೃತ್ಯ ವೈವಿಧ್ಯ, 7.30ಕ್ಕೆ ನವಸೇವಾ ವೃಂದ ಅಂಬಿಲಡ್ಕದ ವಾರ್ಷಿಕೋತ್ಸವ, ಸಭಾ ಕಾರ್ಯಕ್ರಮ, ರಾತ್ರಿ 9.30ಕ್ಕೆ ಶಂನಾಡಿಗ ಕುಂಬಳೆ ಮತ್ತು ಬಳಗದವರಿಂದ ಹರಿಕತೆ ನಡೆಯುವುದು. 5ರಂದು ಸಂಜೆ 4ಕ್ಕೆ ಶ್ರೀ ಕಿನ್ನಿಮಾಣಿ ದೈವದ ನೇಮ, ರಾತ್ರಿ 8ಕ್ಕೆ ಉಜಾರು ಫ್ರೆಂಡ್ಸ್ ಮತ್ತು ಮಡ್ವ ಫ್ರೆಂಡ್ಸ್ ವತಿಯಿಂದ ಹನುಮಗಿರಿ ಮೇಳದವರಿಂದ 'ಚಂದ್ರಾವಳಿ ವಿಲಾಸ-ಮಾಯಾ ಮಾರುತೇಯ' ಪೌರಾಣಿಕ ಯಕ್ಷಗಾನ ಬಯಲಾಟ ನಡೆಯುವುದು.
ಏ. 6ರಂದು ಸಂಜೆ 4.30ಕ್ಕೆ ಪೂಮಾಣಿ ದೈವದ ನೇಮ, ರಾತ್ರಿ 8.30ಕ್ಕೆ ಓಂಕಾರ್ ಫ್ರೆಂಡ್ಸ್ ಬಂಬ್ರಾಣ ಪ್ರಾಯೋಜಕತ್ವದಲ್ಲಿ ಭಕ್ತಿ ಗೀತಾಮೃತ, 9.30ಕ್ಕೆ ಸಂಗೀತ ರಸ ಸಂಜೆ, ನೃತ್ಯ ವೈಭವ ನಡೆಯುವುದು. 7ರಂದು ಸಂಜೆ 4.30ಕ್ಕೆ ಬೀರ್ಣಾಳ್ವ ದೈವ ಮತ್ತು ಪರಿವಾರ ದೈವಗಳ ನೇಮ, ರಾತ್ರಿ 8.30ಕ್ಕೆ ವಿಕ್ರಮ ತಿಲಕನಗರ ಮತ್ತು ನವಸೇವಾ ವೃಂದ ಬಂಬ್ರಾಣ ಪ್ರಾಯೋಜಕತ್ವದಲ್ಲಿ ನೃತ್ಯ ಕಾರ್ಯಕ್ರಮ, 9.30ಕ್ಕೆ ತುಳು ಸಾಮಾಜಿಕ ನಾಟಕ ಪ್ರದರ್ಶನಗೊಳ್ಳುವುದು. 8ರಂದು ಬೆಳಗ್ಗೆ 11ಕ್ಕೆ ಶ್ರೀದೈವಗಳಿಗೆ ತಂಬಿಲ ಸೇವೆ, ಭಂಡಾರ ಇಳಿಯುವ ಕಾರ್ಯಕ್ರಮದೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ.
ನಾಳೆಯಿಂದ ಅಂಬಿಲಡ್ಕ ಶ್ರೀ ಪೂಮಾಣಿ ಕಿನ್ನಿಮಾಣಿ ರಾಜನ್‍ದೈವ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ
0
ಏಪ್ರಿಲ್ 02, 2023