ಕುಂಬಳೆ: ಕೆನರಾ ಅಭಿವೃದ್ಧಿ ಮತ್ತು ಶಾಂತಿ ಸಂಸ್ಥೆ ಮಂಗಳೂರು, ಸ್ಪಂದನ ಒಕ್ಕೂಟ ಕುಂಬಳೆ ಮತ್ತು ಸಂತ ಮೋನಿಕಾ ದೇವಾಲಯ ಕುಂಬಳೆ, ಇವರ ಜಂಟಿ ಆಶ್ರಯದಲ್ಲಿ ಪರಿಸರ ಸಂರಕ್ಷಣಾ ಸಮಾವೇಶ ಕುಂಬಳೆಯಲ್ಲಿ ನಡೆಯಿತು.
ಕುಂಬಳೆ ಸಂತ ಮೋನಿಕಾ ಶಾಲಾ ಸಭಾಂಗಣದಲ್ಲಿ ನಡೆದ ಸಮಾವೇಶವನ್ನು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಪರಿಸರ ಸಂರಕ್ಷಣೆಗೆ ಮುಂದಾಗದಿದ್ದಲ್ಲಿ ಮುಂದಿನ ಪೀಳಿಗೆ ಗಂಭೀರ ಪರಿಣಾಮವನ್ನು ಎದುರಿಸಬೇಕಾಗಿ ಬರಬಹುದು. ಪ್ರತಿಯೊಬ್ಬರೂ ಪರಿಸರದ ಬದ್ಧತೆಯೊಂದಿಗೆ ಮಾಲಿನ್ಯ ಮುಕ್ತವಾದ ಪರಿಸರ ಬೆಳೆಸಬೇಕಿದೆ. ಈ ನಿಟ್ಟಿನಲ್ಲಿ ಸಿ.ಒ.ಡಿ.ಪಿ ಸಂಸ್ಥೆ ನಡೆಸುತ್ತಿರುವ ಕಾರ್ಯಗಳು ಶ್ಲಾಘನೀಯ ಎಂದು ಹೇಳಿದರು.
ಕುಂಬಳೆ ಸಂತ ಮೋನಿಕಾ ದೇವಾಲಯದ ಧರ್ಮಗುರು ವಂದನೀಯ ಅನಿಲ್ ಪ್ರಕಾಶ್ ಡಿ ಸಿಲ್ವಾ ಅಧ್ಯಕ್ಷತೆವಹಿಸಿದ್ದರು. ಸಿ.ಒ.ಡಿ.ಪಿ ಸಂಸ್ಧೆಯ ನಿರ್ದೇಶಕÀ ವಂದನೀಯ ವಿನ್ಸೆಂಟ್ ಡಿ ಸೋಜ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಶಮೀನಾ ಟೀಚರ್, ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷೆ ತಾಹೀರ ಯೂಸಫ್ ,ಕುಂಬಳೆ ಪಂಚಾಯತಿ ಸದಸ್ಯ ವಿವೇಕಾನಂದ ಶೆಟ್ಟಿ, ಸಂತ ಮೋನಿಕಾ ದೇವಾಲಯದ ಪಾಲನಾ ಸಮಿತಿ ಉಪಾಧ್ಯಕ್ಷ ರಾಜು ಸ್ಟೀಫನ್ ಡಿಸೋಜ, ಕಾರ್ಯದರ್ಶಿ ಲಿಡಿಯಾ ಡಿಸೋಜ, ಸ್ಪಂದನ ಒಕ್ಕೂಟದ ಅಧ್ಯಕ್ಷೆ ಜಯಶ್ರೀ ಮೊಂತೇರೊ, ಸ್ಪಂದನ ಒಕ್ಕೂಟದ ಕಾರ್ಯದರ್ಶಿ ಲಕ್ಷ್ಮಿ, ಸಿ.ಒ.ಡಿ.ಪಿಯ ಪೀಟರ್ ಪೌಲ್ ಮೊದಲಾದವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಕೃಷಿ, ಹೈನುಗಾರಿಕೆ, ಜಲಸಂರಕ್ಷಣೆ ಸೇರಿದಂತೆ ಪರಿಸರ ಸಂರಕ್ಷಣೆಯಲ್ಲಿ ಹರಿಶ್ಚಂದ್ರ ಸಾಯ, ಆಲ್ಬರ್ಟ್ ಸಾಯ ಮತ್ತು ಆಂಟನಿ ಡಿ ಸೋಜ ಶಾಂತಿಪಳ್ಳ, ಪುಷ್ಪಲತಾ ಬೆದ್ರಂಪಳ್ಳ, ರಯಾನ ಪಾಡಿ, ಲಕ್ಷ್ಮಿ ಸಾಲೆತ್ತಡ್ಕ, ಪ್ಲೋರಾ ಕ್ರಾಸ್ತ, ರಾಧಿಕಾ ಸೂರಂಬೈಲ್ ಮತ್ತು ಶಾಲಿನಿ ಕಣ್ಣೂರು ರವರನ್ನು ಗಣ್ಯರು ಗೌರವಿಸಿದರು.
ಗುರುದೀಕ್ಷೆ ಪಡೆದು 18 ವರ್ಷ ಪೂರ್ಣಗೊಳಿಸಿದ ಕುಂಬಳೆ ಸಂತ ಮೋನಿಕಾ ದೇವಾಲಯದ ಧರ್ಮಗುರು ವಂದನೀಯ ಅನಿಲ್ ಪ್ರಕಾಶ್ ಡಿಸೋಜ ರವರನ್ನು ಸಿ.ಒ.ಡಿ.ಪಿ ನಿರ್ದೇಶಕ ವಂದನೀಯ ವಿನ್ಸೆಂಟ್ ಡಿ ಸೋಜ ಸನ್ಮಾನಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಖ್ಯಾತ ಪರಿಸರ ಪ್ರೇಮಿ ಆನಂದ ಪೆಕ್ಕಾಡಮ್‍ವರು ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಸಮಾವೇಶದಂಗವಾಗಿ ಚರ್ಚ್ ಪರಿಸರದಲ್ಲಿ ಪರಿಸರ ಸ್ನೇಹಿ ಆಸನವನ್ನು ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಸಮೀನಾ ಟೀಚರ್ ಉದ್ಘಾಟಿಸಿದರು. ಹಣ್ಣಿನ ಗಿಡಗಳನ್ನು ಸಂದರ್ಭದಲ್ಲಿ ನೆಡಲಾಯಿತು. ವಿವಿಧ ಘಟಕಗಳಿಂದ ಸ್ವ-ತಿಂಡಿ-ತಿನಿಸು, ಖಾದ್ಯಗಳ ಮಾರಾಟ ಮಳಿಗೆಯನ್ನು ಏರ್ಪಡಿಸಲಾಗಿತ್ತು . ಸ್ಪಂದನ ಮಹಿಳಾ ಒಕ್ಕೂಟದ ಅಧ್ಯಕ್ಷೆ ಜಯಶ್ರೀ ಮೊಂತೇರೊ ವಂದಿಸಿದರು. ರವಿಕುಮಾರ್ ಕ್ರಾಸ್ತಾ ಮತ್ತು ವಿಜಯ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.