ಕಾಸರಗೋಡು: ರಾಜ್ಯ ಸರ್ಕಾರದ ಎರಡನೇ ವರ್ಷಾಚರಣೆ ಅಂಗವಾಗಿ ನಡೆಯುತ್ತಿರುವ ನನ್ನ ಕೇರಳ ವಸ್ತುಪ್ರದರ್ಶನ ಮತ್ತು ಮಾರುಕಟ್ಟೆ ಮೇಳದ ನಿಮಿತ್ತ ಯುವ ಸಮೂಹಕ್ಕೆ ನಡೆದ ಭಾಷಣ ಸ್ಪರ್ಧೆಯಲ್ಲಿ ಜಿಲ್ಲೆಯ ಅಭಿವೃದ್ಧಿ ಕನಸುಗಳಿಗೆ ಬಲ ದೊರಕಿದೆ. ಕಾಸರಗೋಡು ಜಿಲ್ಲೆಯ ಸುಸ್ಥಿರ ಅಭಿವೃದ್ಧಿ ಎಂಬ ವಿಷಯದ ಮೇಲೆ ನಡೆದ ಸ್ಪರ್ಧೆಯಲ್ಲಿ ಒಂಬತ್ತು ಮಂದಿ ಭಾಗವಹಿಸಿದ್ದರು. ಕಲೆಕ್ಟರೇಟ್ ನ ಕಂದಾಯ ಇಲಾಖೆಯ ನೌಕರ ಕೆ.ಟಿ.ಧನೇಶ್ ಪ್ರಥಮ ಸ್ಥಾನ, ಪಡನ್ನದ ಎಂಆರ್ ವಿಎಚ್ ಎಸ್ ಎಸ್ ಶಾಲೆಯ ಶಿಕ್ಷಕ ಟಿ.ಅನಿಶ್ ದ್ವಿತೀಯ ಹಾಗೂ ಕಲೆಕ್ಟರೇಟ್ ಕಂದಾಯ ಇಲಾಖೆಯ ನೌಕರ ಪಿ.ಧನೇಶ್ ತೃತೀಯ ಸ್ಥಾನ ಪಡೆದರು. ತೀವ್ರ ಸ್ಪರ್ಧೆಯಲ್ಲಿ.
ಜಿಲ್ಲಾ ಹಣಕಾಸು ಅಧಿಕಾರಿ ಎಂ.ಶಿವಪ್ರಕಾಶನ ನಾಯರ್, ಕಿರಿಯ ಅಧೀಕ್ಷಕ ರಮೇಶ ಪೆÇಯಿನಾಚಿ, ಸುಭಾಷ್ ವನಶ್ರೀ ತೀರ್ಪುಗಾರರಾಗಿದ್ದರು. ಜಿಲ್ಲಾ ಮಾಹಿತಿ ಅಧಿಕಾರಿ, ಜಿಎಸ್‍ಟಿ ಜಂಟಿ ನಿರ್ದೇಶಕ ಪಿ.ಸಿ.ಜಯರಾಜನ್ ಮತ್ತು ಕಾಸರಗೋಡು ಡಿಡಿಇ ಕಚೇರಿ ಆಡಳಿತ ಸಹಾಯಕ ಬಿ.ಸುರೇಂದ್ರನ್ ಮಾತನಾಡಿದರು.
ಜಿಲ್ಲೆಯ ಅಭಿವೃದ್ಧಿ ಕನಸುಗಳ ಕುರಿತು ಭಾಷಣ ಸ್ಪರ್ಧೆ
0
ಏಪ್ರಿಲ್ 12, 2023