ಮುಂಬೈ (PTI): ಬಸ್ಸುಗಳಲ್ಲಿ ಪ್ರಯಾಣಿಕರು ಮೊಬೈಲ್ ಫೋನ್‌ಗಳಲ್ಲಿ ಜೋರಾಗಿ ಮಾತನಾಡುವುದು, ಹೆಡ್‌ಫೋನ್‌ಗಳನ್ನು ಬಳಸದೇ ಆಡಿಯೊ ಕೇಳಿಸಿಕೊಳ್ಳುವುದು ಮತ್ತು ವಿಡಿಯೊ ನೋಡುವುದನ್ನು ಬೃಹನ್ಮುಂಬೈ ವಿದ್ಯುತ್ ಪೂರೈಕೆ ಮತ್ತು ಸಾರಿಗೆ (ಬಿಇಎಸ್‌ಟಿ) ನಿಷೇಧಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಪ್ರಯಾಣಿಕರಿಂದ ಬಂದ ದೂರುಗಳನ್ನು ಸ್ವೀಕರಿಸಿದ ನಾಗರಿಕ ಸಾರಿಗೆ ಸಂಸ್ಥೆ ಕೂಡಲೇ ಕ್ರಮ ಕೈಗೊಂಡು, ಏಪ್ರಿಲ್ 24ರಂದು ಈ ಅಧಿಸೂಚನೆ ಹೊರಡಿಸಿದೆ ಎಂದು ಬಿಇಎಸ್‌ಟಿ ವಕ್ತಾರರು ತಿಳಿಸಿದ್ದಾರೆ.
ಹೊಸ ನಿಯಮದ ಅನುಸಾರ ಬಿಇಎಸ್‌ಟಿ ಬಸ್ಸುಗಳಲ್ಲಿ ಪ್ರಯಾಣಿಸುವವರು ಮೊಬೈಲ್ ಫೋನ್‌ಗಳಲ್ಲಿ ಆಡಿಯೊಗಳನ್ನು ಕೇಳಿಸಿಕೊಳ್ಳುವಾಗ ಮತ್ತು ವಿಡಿಯೊ ನೋಡುವಾಗ ಹೆಡ್‌ಫೋನ್‌ಗಳನ್ನು ಕಡ್ಡಾಯವಾಗಿ ಬಳಸಬೇಕು. ಈ ಮೂಲಕ ಸಹಪ್ರಯಾಣಿಕರಿಗೆ ತೊಂದರೆ ಆಗುವುದನ್ನು ತಪ್ಪಿಸಬೇಕು. ಈ ನಿಯಮವನ್ನು ಉಲ್ಲಂಘಿಸಿದವರ ವಿರುದ್ಧ ಬಾಂಬೆ ಪೊಲೀಸ್ ಕಾಯ್ದೆಯ ಸೆಕ್ಷನ್ 38/112ರ ಅಡಿ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ವಕ್ತಾರರು ತಿಳಿಸಿದ್ದಾರೆ.
ಬಿಇಎಸ್‌ಟಿ ಅಡಿ ಸುಮಾರು 3,400 ಬಸ್ಸುಗಳಿವೆ. ಈ ಸುತ್ತೋಲೆಯ ಪ್ರತಿಗಳನ್ನು ಎಲ್ಲಾ ಬಸ್ಸುಗಳ ಮೇಲೆ ಲಗತ್ತಿಸಲು ಇಲಾಖೆ ಸೂಚಿಸಿದೆ. ಇಲಾಖೆಯ ಎಲ್ಲಾ ಸಿಬ್ಬಂದಿಗೂ ಹೊಸ ನಿಯಮಗಳ ಕುರಿತು ಅರಿವು ಮೂಡಿಸಲಾಗುವುದು ಎಂದು ಅವರು ಹೇಳಿದ್ದಾರೆ.