ಕುಂಬಳೆ: ಬಿ.ಎಂ.ಎಸ್ ನಿರ್ಮಾಣ ಯೂನಿಟ್ ಸಭೆ ಕುಂಬಳೆಯಲ್ಲಿರುವ ಕಚೇರಿಯಲ್ಲಿ ಇತ್ತೀಚೆಗೆ ಜರಗಿತು. ವಲಯ ಅಧ್ಯಕ್ಷ ಕೃಷ್ಣಗಟ್ಟಿ ಅಧ್ಯಕ್ಷತೆ ವಹಿಸಿದರು. ನಿರ್ಮಾಣ ಯೂನಿಯನ್ ಜಿಲ್ಲಾ ಉಪಾಧ್ಯಕ್ಷ ಐತ್ತಪ್ಪ ನಾರಾಯಣಮಂಗಲ ಮಾತನಾಡಿ ಸಂಘಟನೆಯ ಕಾರ್ಯ ಪ್ರವರ್ತನೆಗಳ ಬಗ್ಗೆ ವಿವರಿಸಿದರು. ಎಲ್ಲಾ ನಿರ್ಮಾಣ ಕ್ಷೇಮ ನಿಧಿಯ ಪಿಂಚಣಿ ಪಡೆಯುವ ಕಾರ್ಮಿಕರು ಎಪ್ರಿಲ್ 1 ರಿಂದ ಮೇ ತಿಂಗಳ ಒಳಗೆ ತಮ್ಮ ಪಿಂಚಣಿ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಆಧಾರ ಕಾರ್ಡ್ ದಾಖಲೆಗಳನ್ನು ಅಕ್ಷಯ ಕೇಂದ್ರಗಳ ಮೂಲಕ ಬೆರಳಚ್ಚು ನೀಡಿ ಮಸ್ಟರಿಂಗ್ ನಡೆಸಬೇಕು. ಇಲ್ಲದಿದ್ದಲ್ಲಿ ಪಿಂಚಣಿ ಲಭಿಸವುದಿಲ್ಲ ಎಂಬ ಸೂಚನೆಯ ಬಗ್ಗೆ ತಿಳಿಸಿದರು. ಜಿಲ್ಲೆಯ ಎಲ್ಲಾ ಕಾರ್ಮಿಕ (ಪಿಂಚಣಿ ಪಡೆಯುವವರು) ಮಸ್ಟರಿಂಗ್ ಮಾಡಿಸಬೇಕಾದ ಅನಿವಾರ್ಯತೆ ಬಗ್ಗೆ ವಿವರಿಸಿದರು. ಮಾಧವ ಪೆರುವಾಡು ಸ್ವಾಗತಿಸಿ, ಸದಾನಂದ ವಂದಿಸಿದರು.
ಬಿ.ಎಂ.ಎಸ್ ನಿರ್ಮಾಣ ಯೂನಿಟ್ ಸಭೆ
0
ಏಪ್ರಿಲ್ 14, 2023
Tags