ಕುಂಬಳೆ: ಕುಂಬಳೆ ಸಮೀಪದ ನಾರಾಯಣಮಂಗಲದಲ್ಲಿ 1973ರಲ್ಲಿ ಸ್ಥಾಪಿತವಾದ ಶ್ರೀ ವಿಘ್ನೇಶ್ವರ ಯಕ್ಷಗಾನ ಸಂಘ ಐವತ್ತು ವರ್ಷಗಳ ಕಾಲ ಯಕ್ಷಗಾನ ಕಲಾಸೇವೆ ಮಾಡುತ್ತಾ ಇದೀಗ ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿದೆ. ಸುವರ್ಣ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ಬಗ್ಗೆ ಇತ್ತೀಚೆಗೆ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಚರ್ಚಿಸಲಾಯಿತು. ಗೋಪಾಲಕೃಷ್ಣ ನಾಯಕ್ ಸೂರಂಬೈಲು ಸಭೆಯ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಕಂಬಾರು ಕೇಶವ ಭಟ್ ಸ್ವಾಗತಿಸಿ ಕಾರ್ಯಕ್ರಮದ ರೂಪುರೇಷೆಯನ್ನು ಸಭೆಯ ಮುಂದಿಟ್ಟರು. ವಾರ್ಷಿಕ ವರದಿ ಮತ್ತು ಆಯ-ವ್ಯಯ ಲೆಕ್ಕಪತ್ರವನ್ನು ಸಭೆಯಲ್ಲಿ ಮಂಡಿಸಿ ಮಂಜೂರುಗೊಳಿಸಲಾಯಿತು.
ಬಳಿಕ ಸಮರಸನ್ನಾಹ, ಭೀಷ್ಮಸೇನಾಧಿಪತ್ಯ ಎಂಬ ಯಕ್ಷಗಾನ ತಾಳಮದ್ದಳೆ ಜರಗಿತು. ಭಾಗವತರಾಗಿ ಕಂಬಾರು ಕೇಶವ ಭಟ್, ಬೇಂದ್ರೋಡು ಗೋವಿಂದ ಭಟ್, ಲಕ್ಷ್ಮೀಶ ಬೇಂಗ್ರೋಡಿ, ವಸಂತಕುಮಾರ್ ದೊಡ್ಡಮಾಣಿ, ಹಿಮ್ಮೇಳದಲ್ಲಿ ರಾಜೇಂದ್ರಪ್ರಸಾದ್ ಪುಂಡಿಕಾಯಿ, ಕೃಷ್ಣಮೂರ್ತಿ ಪಾಡಿ, ಲಕ್ಷ್ಮೀಶ ಮಧೂರು, ಪಾತ್ರಧಾರಿಗಳಾಗಿ ಗೋಪಾಲಕೃಷ್ಣ ನಾಯಕ್ ಸೂರಂಬೈಲು, ಸದಾಶಿವ ಗಟ್ಟಿ ನಾಯ್ಕಾಪು, ಸದಾಶಿವ ಮುಳಿಯಡ್ಕ, ಮುರಳೀಧರ ಯಾದವ್ ನಾಯ್ಕಾಪು, ಉದಯಶಂಕರ ಭಟ್ ಮಜಲು, ಡಾ. ಬೇಸೀ ಗೋಪಾಲಕೃಷ್ಣ ಭಟ್, ಜನಾರ್ದನ ಆಚಾರ್ಯ ನಾಯ್ಕಾಪು, ಗುರುಮೂರ್ತಿ ನಾಯ್ಕಾಪು ಸಹಕರಿಸಿದರು.
ವಿಘ್ನೇಶ್ವರ ಯಕ್ಷಗಾನ ಸಂಘಕ್ಕೆ ಸುವರ್ಣ ಸಂಭ್ರಮ
0
ಏಪ್ರಿಲ್ 16, 2023
Tags