ತಿರುವನಂತಪುರಂ: ತಿರುವನಂತಪುರಂ ಸಮೀಪದ ವೆಲ್ಲನಾಡ್‍ನಲ್ಲಿ ಗುರುವಾರ ಕರಡಿ ಸಾವನ್ನಪ್ಪಿದ ಬಗ್ಗೆ ವಿವರವಾದ ತನಿಖೆಗೆ ಕೇರಳ ಅರಣ್ಯ ಸಚಿವರು ಆದೇಶಿಸಿದ್ದಾರೆ.
ಜನವಸತಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಕರಡಿ ಬಾವಿಯಲ್ಲಿ ಮುಳುಗಿ ಮೃತಪಟ್ಟಿತ್ತು.
ತಮ್ಮ ಕಳಪೆ ಯೋಜಿತ ರಕ್ಷಣಾ ಕಾರ್ಯಾಚರಣೆಗಾಗಿ ಅರಣ್ಯ ಇಲಾಖೆ ಮೇನಕಾ ಗಾಂಧಿ ಸಹಿತ ರಾಷ್ಟ್ರ ಮಟ್ಟದ ಪ್ರಾಣಿ ದಯಾಸಂಘದ ಟೀಕೆಗೆ ಗುರಿಯಾಗಿತ್ತು.
ಈ ದುರ್ಘಟನೆ ನಡೆಯಬಾರದಿತ್ತು ಎಂದು ಅರಣ್ಯ ಸಚಿವ ಎ ಕೆ ಶಶೀಂದ್ರನ್ ಬಳಿಕ ಪ್ರತಿಕ್ರಿಯಿಸಿದ್ದಾರೆ. ಸ್ಥಳದಲ್ಲಿದ್ದ ವಿಭಾಗೀಯ ಅರಣ್ಯಾಧಿಕಾರಿ ಕೆ.ಐ.ಪ್ರದೀಪ್ ಕುಮಾರ್ ಸಲ್ಲಿಸಿದ ಪ್ರಾಥಮಿಕ ವರದಿಯನ್ನು ಸ್ವೀಕರಿಸಿದ್ದೇವೆ ಎಂದು ತಿಳಿಸಿದರು.
" ಕರಡಿಯು ರಿಂಗ್ ನೆಟ್ ಬದಿಯಿಂದ ಬಾವಿಗೆ ಬಿದ್ದಿದೆ ಎಂದು ಪ್ರಾಥಮಿಕ ವರದಿ ಹೇಳುತ್ತದೆ. ಕರಡಿ ಕೆಳಬಿದ್ದುದರಿಂದ ಬಾವಿಯಲ್ಲಿನ ನೀರನ್ನು ತೆಗೆಯಲು ಅರಣ್ಯ ಅಧಿಕಾರಿಗಳಿಗೆ ಕಷ್ಟವಾಯಿತು. ಜನಸಂದಣಿಯೂ ಸಮಸ್ಯೆಯಾಗಿತ್ತು. ಘಟನೆಯ ಬಗ್ಗೆ ವಿವರವಾದ ತನಿಖೆಯನ್ನು ಪಡೆಯಲು ಬಯಸಿ ಸಿಡಬ್ಲ್ಯೂಡಬ್ಲ್ಯೂ ಗೆ ತಿಳಿಸಲಾಗಿದೆ” ಎಂದು ಶಶೀಂದ್ರನ್ ಹೇಳಿದರು.
ಅರಣ್ಯಗಳ (ವನ್ಯಜೀವಿ) ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿಯೂ ಆಗಿರುವ ಸಿಡಬ್ಲ್ಯೂಡಬ್ಲ್ಯೂ ಸೋಮವಾರ ವಿವರವಾದ ವರದಿಯನ್ನು ನೀಡುವ ನಿರೀಕ್ಷೆಯಿದೆ.
ಬಾಡಿಗೆ ಮನೆಯಲ್ಲಿ ವಾಸವಿದ್ದ ಪ್ರಭಾಕರನ್ ನಾಯರ್ ಎಂಬುವವರ ಬಾವಿಗೆ ಕರಡಿ ಬಿದ್ದಿತ್ತು. ವೆಲ್ಲನಾಡ್ ಕನ್ನಂಪಳ್ಳಿ ಗ್ರಾಮ ಪಂಚಾಯಿತಿ ವಾರ್ಡ್‍ನಲ್ಲಿ ಗುರುವಾರ ನಸುಕಿನ ವೇಳೆ ಈ ಘಟನೆ ನಡೆದಿದೆ. ಕೋಳಿಗಳನ್ನು ಬೇಟೆಯಾಡಲು ಕಾಡು ಪ್ರಾಣಿ ಯತ್ನಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಗದ್ದಲದ ನಂತರ, ಗಾಬರಿಗೊಂಡ ಕರಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿತು ಮತ್ತು ಅದು ಬಾವಿಯೊಳಗೆ ಬಿದ್ದಿತು. ಮನೆಯವರು ಪೆÇಲೀಸ್ ಹಾಗೂ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅರಣ್ಯ ಪಶುವೈದ್ಯರು ರಜೆಯಲ್ಲಿದ್ದ ಕಾರಣ, ಅವರು ತಿರುವನಂತಪುರಂ ಮೃಗಾಲಯದಲ್ಲಿ ಹಿರಿಯ ಪಶುವೈದ್ಯಕೀಯ ವೈದ್ಯ ಜಾಕೋಬ್ ಅಲೆಕ್ಸಾಂಡರ್ ಅವರನ್ನು ಸೇವೆಗೆ ನೇಮಿಸಿದರು. ಹಿರಿಯ ಪಶುವೈದ್ಯರು ಅಲ್ಲಿಗೆ ತಲುಪುವಷ್ಟರಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬಾವಿಯೊಳಗೆ ರಿಂಗ್ ನೆಟ್ ಹಾಕಿ ಅದರ ಮೇಲೆ ಕರಡಿಯನ್ನು ಬರಿಸಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಪ್ರಾಣಿಯನ್ನು ಮೇಲಕ್ಕೆತ್ತಲು ಯತ್ನಿಸುತ್ತಿದ್ದಂತೆಯೇ ನೀರೊಳಗೆ ಬಿತ್ತು. ನೀರಿನಲ್ಲಿ ಮುಳುಗಿದ ಕರಡಿಯನ್ನು ಹೊರತೆಗೆಯಲು ಅಧಿಕಾರಿಗಳಿಗೆ 15 ನಿಮಿಷಕ್ಕೂ ಹೆಚ್ಚು ಸಮಯ ಬೇಕಾಯಿತು.
ಆರೋಗ್ಯವಾಗಿದ್ದ 9-15 ವರ್ಷದ ಗಂಡು ಕರಡಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ. ಈ ಮಧ್ಯೆ ಅರಿವಳಿಕೆಯ ಕಾರಣ ಸಾವನ್ನಪ್ಪಿದೆ ಎಂಬ ವರದಿಗಳೂ ಇವೆ.