ನವದೆಹಲಿ: ಸಮಯಕ್ಕೆ ಅನುಗುಣವಾಗಿ ಸಾಲದ ಪುನರ್‌ರಚನೆಯಿಂದ ಜಾಗತಿಕ ಸಾಲದ ಬಿಕ್ಕಟ್ಟನ್ನು ಪರಿಹರಿಸಲು ಸಾಧ್ಯ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟರು.
ಬುಧವಾರ ವಾಷಿಂಗ್ಟನ್ ಡಿಸಿಯಲ್ಲಿ ಆರಂಭವಾದ ಜಿ20 ಹಣಕಾಸು ಮಂತ್ರಿಗಳ ಸೆಂಟ್ರಲ್ ಬ್ಯಾಂಕ್ ಗವರ್ನರ್‌ಗಳ (ಎಫ್‌ಎಂಸಿಬಿಜಿ) ಸಭೆಯ ಮೊದಲ ದಿನದಂದು ಅವರು ಈ ಹೇಳಿಕೆ ನೀಡಿದ್ದಾರೆ
ಅವರು ವಾಷಿಂಗ್ಟನ್‌ನಲ್ಲಿ ಬುಧವಾರ ಪ್ರಾರಂಭವಾದ ಜಿ20 ಅಂಗವಾಗಿ ಹಣಕಾಸು ಸಚಿವರ ಸೆಂಟ್ರಲ್ ಬ್ಯಾಂಕ್ ಗವರ್ನರ್‌ಗಳ(ಎಫ್‌ಎಂಸಿಬಿಜಿ) ಮೊದಲ ದಿನದ ಸಭೆಯಲ್ಲಿ ಈ ಹೇಳಿಕೆಯನ್ನು ನೀಡಿದರು.
'ಜಾಗತಿಕ ಸಾಲದ ಬಿಕ್ಕಟ್ಟು ಬಡತನ ನಿವಾರಣೆಯ ಸವಾಲಿನೊಂದಿಗೆ ಹೆಣೆದುಕೊಂಡಿದ್ದು, ಈ ಸಮಸ್ಯೆಯನ್ನು ನೀಡುವ ಸಾಲದ ಪುನರ್‌ರಚನೆಯಿಂದ ಪರಿಹರಿಸಲು ಸಾಧ್ಯ . ಇಲ್ಲವಾದರೆ ಇದರ ಪರಿಣಾಮವನ್ನು ಸಾಲದ ಋಣದಲ್ಲಿರುವ ಬಡ ದೇಶಗಳು ಅನುಭವಿಸಬೇಕಾಗುತ್ತವೆ' ಎಂದು ನಿರ್ಮಲಾ ತಿಳಿಸಿದರು.
ಇದೇ ವೇಳೆ ಹಣಕಾಸು ಸಚಿವರು, ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್‌ಗಳನ್ನು(ಎಂಡಿಬಿ) ಸದೃಢಗೊಳಿಸುವ ಕಾರ್ಯಯೋಜನೆಯ ಬಗ್ಗೆ ಚರ್ಚಿಸಿದರು. ಅಲ್ಲದೆ, ಬಂಡವಾಳದ ಸಮರ್ಪಕ ಬಳಕೆಯ ಅನುಷ್ಠಾನದ ಕುರಿತು ಮಾತುಕತೆ ನಡೆಸಿದರು.