ಕೋಝಿಕ್ಕೋಡ್: ಮಲೆಯಾಳಂ ಚಲಚಿತ್ ರಂಗದ ಖ್ಯಾತ ನಟ ಮಾಮುಕೋಯ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಕೋಝಿಕ್ಕೋಡ್‍ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಕೊನೆಯುಸಿರೆಳೆದಿದ್ದಾರೆ. ಸಾವಿಗೆ ಹೃದಯಾಘಾತ ಮತ್ತು ಸೆರೆಬ್ರಲ್ ಹೆಮರೇಜ್ ಕಾರಣ ಎನ್ನಲಾಗಿದೆ.
ನಿನ್ನೆ ಮಲಪ್ಪುರಂನ ಕಾಳಿಕಾವಿಲ್‍ನಲ್ಲಿ ಪುಟ್‍ಬಾಲ್ ಪಂದ್ಯವನ್ನು ಉದ್ಘಾಟಿಸುವ ವೇಳೆ ಕುಸಿದು ಬಿದ್ದಿದ್ದರು. ನಂತರ ವಂದೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ, ಅವರ ಸ್ಥಿತಿ ಹದಗೆಟ್ಟಿದ್ದರಿಂದ, ಅವರನ್ನು ಕೋಝಿಕ್ಕೋಡ್‍ನ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅವರನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು.