HEALTH TIPS

ಇನ್ನು ಗುರುವಾಯೂರು ದೇವಸ್ಥಾನದಲ್ಲಿ ರಾತ್ರಿ ವೇಳೆಯೂ ವಿವಾಹಕ್ಕೆ ಅನುಮತಿ: ದೇವಸ್ವಂ ಮಂಡಳಿ ಸಭೆ ತೀರ್ಮಾನ


            ತ್ರಿಶೂರ್: ಗುರುವಾಯೂರು ದೇವಸ್ಥಾನದಲ್ಲಿ ರಾತ್ರಿ ವೇಳೆ ವಿವಾಹ ನಡೆಸಲು ದೇವಸ್ವಂ ಆಡಳಿತ ಸಮಿತಿ ಸಭೆ ಅನುಮತಿ ನೀಡಿದೆ.
             ಅತಿ ಹೆಚ್ಚು ಹಿಂದೂ ವಿವಾಹಗಳು ನಡೆಯುವ ದೇವಾಲಯ ಇದಾಗಿರುವುದರಿಂದ ರಾತ್ರಿ ವಿವಾಹಕ್ಕೂ ಸೌಲಭ್ಯ ಕಲ್ಪಿಸಲಾಗಿದೆ.
            ಸಾಮಾನ್ಯವಾಗಿ ದೇವಸ್ಥಾನದಲ್ಲಿ ಬೆಳಗ್ಗೆ 5ರಿಂದ ಮಧ್ಯಾಹ್ನದ ಪೂಜೆಯ ನಂತರ ಮಧ್ಯಾಹ್ನ 1.30ರವರೆಗೆ ವಿವಾಹ ಕಾರ್ಯಕ್ರಮಗಳು ನಡೆಯುತ್ತಿದ್ದವು. ಬಳಿಕ ವಿವಾಹಕ್ಕೆ ವ್ಯವಸ್ಥೆಗಳಿರಲಿಲ್ಲ. ಆದರೆ ಇನ್ನು ಮುಂದೆ ರಾತ್ರಿಯೂ ವಿವಾಹ ನಡೆಸಬಹುದು ಎಂದು ದೇವಸ್ವಂ ಆಡಳಿತ ಸಮಿತಿ ಪ್ರಕಟಿಸಿದೆ. ಶಿವಾಲಿಯ ಹೊರಭಾಗದಲ್ಲಿ ರಾತ್ರಿ 9 ಗಂಟೆಯವರೆಗೆ ವ್ಯವಸ್ಥೆಗಳಿರಲಿದೆ. ಆದರೆ ವಿವಾಹ ಕ್ರಿಯೆಗಳಿಗೆ ಎಷ್ಟು ಸಮಯಾವಕಾಶ ನೀಡಬಹುದು ಎಂಬುದು ನಿರ್ಧಾರವಾಗಿಲ್ಲ. ಪ್ರಸ್ತುತ ಪೂರ್ವ ಭಾಗದಲ್ಲಿ ಮೂರು ವಿವಾಹ  ಮಂಟಪಗಳಿವೆ. ಇದಲ್ಲದೇ ವಿವಾಹ ಮಂಟಪದ ಸಿದ್ಧತೆಗೆ ಈಗಾಗಲೇ ಸಿದ್ಧತೆ ನಡೆದಿದೆ. ಸಂಚಾರ ದಟ್ಟಣೆಯ ಸಂದರ್ಭದಲ್ಲಿ ಬಳಸಲು ಎರಡು ತಾತ್ಕಾಲಿಕ ಮಂಟಪಗಳನ್ನು ಸಹ ಸ್ಥಾಪಿಸಲಾಗಿದೆ.
            ಗುರುವಾಯೂರಿನಲ್ಲಿ ಒಂದು ವರ್ಷದಲ್ಲಿ 7000 ಕ್ಕೂ ಹೆಚ್ಚು ವಿವಾಹಗಳು ನಡೆಯುತ್ತವೆ. ಒಂದೇ ದಿನದಲ್ಲಿ 246 ಮದುವೆಗಳು ನಡೆದಿರುವ ದಾಖಲೆಗಳಿವೆ. ರಿಜಿಸ್ಟರ್ಡ್ ಮ್ಯಾರೇಜ್ ಗಳನ್ನೂ ಬದಲಾಯಿಸಬೇಕಾದ ಪ್ರಸಂಗಗಳು, ತರಾತುರಿಯಲ್ಲಿ ವಧು-ವರರನ್ನು ಬದಲಾಯಿಸಿದ ಪ್ರಕರಣಗಳಿವೆ. 100ಕ್ಕೂ ಹೆಚ್ಚು ಮಂಟಪಗಳಿರುವ ಗುರುವಾಯೂರಿನಲ್ಲಿ ಜನನಿಬಿಡ ದಿನಗಳಲ್ಲಿ ಮಂಟಪ ನೀಡಲು ಮಾಲೀಕರಿಗೆ ಸಾಧ್ಯವಾಗದೆ, ಮದುವೆಯ ಕಡೆಯವರಿಗೆ ಮಂಟಪ ಸಿಗದೆ ಪರದಾಡುವಂತಾಗಿದೆ.
            ಸುಮಾರು ಅರ್ಧ ಶತಮಾನದ ಹಿಂದೆ ಕೇರಳದ ಹಿಂದೂಗಳಲ್ಲಿ ರಾತ್ರಿ ವಿವಾಹಗಳು ಸಾಮಾನ್ಯವಾಗಿತ್ತು. ಗುರುವಾಯೂರಿನಲ್ಲಿ ರಾತ್ರಿ ವಿವಾಹಗಳು ನಡೆಯುವುದರಿಂದ, ಕೇರಳೀಯ ವಿವಾಹ  ಪರಿಕಲ್ಪನೆಗಳ ಶೈಲಿಯೂ ಬದಲಾಗಬಹುದು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries