ಅಹಮ್ಮದಾಬಾದ್: ರಾಜ್ಯ ಪ್ರಾಣಿ ಕಲ್ಯಾಣ ಇಲಾಖೆ ಸಚಿವೆ ಜೆ. ಚಿಂಚುರಾಣಿ ಅವರು ಕೇರಳದ ಉನ್ನತ ಮಟ್ಟದ ನಿಯೋಗದೊಂದಿಗೆ ಗುಜರಾತ್‍ನಲ್ಲಿರುವ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ ಪ್ರಧಾನ ಕಚೇರಿ ಮತ್ತು ಸಿಎನ್‍ಜಿ ಘಟಕಕ್ಕೆ ಭೇಟಿ ನೀಡಿದರು.
ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ ಕೇಂದ್ರ ಕಚೇರಿಗೆ ಭೇಟಿ ನೀಡಿದ ಸಚಿವರು ಅಧ್ಯಕ್ಷ ಮೀನೇಶ್ ಶಾ ಅವರನ್ನು ಭೇಟಿ ಮಾಡಿದರು.
ಕಿಸಾನ್ ರೈಲು ಸಾರಿಗೆ ವ್ಯವಸ್ಥೆಯ ಮೂಲಕ ರಾಜ್ಯಕ್ಕೆ ಕಡಿಮೆ ದರದಲ್ಲಿ ಜಾನುವಾರು ಮೇವಿನ ಕಚ್ಚಾವಸ್ತುಗಳನ್ನು ರಾಜ್ಯಕ್ಕೆ ತರಲು ಕೇರಳ ಸರ್ಕಾರದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ ಹೈನುಗಾರಿಕೆ ಅಭಿವೃದ್ಧಿ ಮಂಡಳಿಯ ಮೂಲಕ ಅನುಮೋದಿಸಲಿದೆ ಎಂದು ಅಧ್ಯಕ್ಷರು ಭರವಸೆ ನೀಡಿರುವÀರು ಎಂದು ಸಚಿವರು ಟಿಪ್ಪಣಿಯಲ್ಲಿ ಹಂಚಿಕೊಂಡಿದ್ದಾರೆ. ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರೊಂದಿಗೆ ನಡೆಸಿದ ಚರ್ಚೆಯಲ್ಲಿ, ಗುಜರಾತ್‍ನಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿರುವ ಸಗಣಿ ಸಂಸ್ಕರಣೆಯ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಲು ಒಪ್ಪಿಗೆ ನೀಡಲಾಗಿದೆ ಎಂದು ಸಚಿವರು ಹೇಳಿದರು.
ರೈತರ ಮನೆಗಳಿಂದ ಸಗಣಿ ಖರೀದಿಸಿ ಸ್ಥಾವರದಲ್ಲಿ ವಾಣಿಜ್ಯ ಆಧಾರದ ಮೇಲೆ ಸಿಎನ್‍ಜಿ ಉತ್ಪಾದಿಸಲಾಗುವುದು ಎಂದು ಸಚಿವರು ಹೇಳಿದರು. ಇದರಿಂದ ಕೃಷಿಕರಿಗೆ(ಹೈನುಗಾರರಿಗೆ) ಅಲ್ಲಿ ಹೆಚ್ಚುವರಿ ಆದಾಯ ಬರುತ್ತಿದೆ ಎಂದು ಸಚಿವರು ಹೇಳಿದರು. ಗುಜರಾತ್‍ನಲ್ಲಿರುವ ಬನಾಸ್ ಡೈರಿಯ ಸಿಎನ್‍ಜಿ ಘಟಕಕ್ಕೆ ಭೇಟಿ ನೀಡಿದ ಸಚಿವರು, ದಿನಕ್ಕೆ 40 ಟನ್ ಗೋಮಯದಿಂದ 800 ಕೆಜಿ ಅನಿಲ ಉತ್ಪಾದನೆಯಾಗುತ್ತದೆ ಮತ್ತು ಉಪ ಉತ್ಪನ್ನವಾಗಿ ಗೋವಿನ ಸಗಣಿಯಿಂದ ಸಾವಯವ ಗೊಬ್ಬರವನ್ನು ಸಹ ತಯಾರಿಸಲಾಗುತ್ತದೆ ಎಂದು ತಿಳಿಸಿರುವರು.
ರೈತರ ಮನೆಯಿಂದ ಹಸುವಿನ ಸಗಣಿ ಖರೀದಿಸಿ ಸ್ಥಾವರದಲ್ಲಿ ವಾಣಿಜ್ಯ ಆಧಾರದ ಮೇಲೆ ಸಿಎನ್‍ಜಿ ಉತ್ಪಾದನೆ: ಸಚಿವೆ ಜೆ.ಚಿಂಚುರಾಣಿ
0
ಏಪ್ರಿಲ್ 07, 2023
Tags