HEALTH TIPS

ಅನಾರೋಗ್ಯ ಎಂದು ಮನೆಗೆ ಕರೆದ ಕೂಡಲೇ ಮಹಿಳೆಯ ಮಾತು ನಂಬಿ ಹೋದ ವೈದ್ಯನಿಗೆ ಕಾದಿತ್ತು ಶಾಕ್​!

 

                ಕೊಚ್ಚಿ: ವೈದ್ಯರೊಬ್ಬರನ್ನು ಹನಿಟ್ರ್ಯಾಪ್​ ಬಲೆಗೆ ಬೀಳಿಸಿ 5 ಲಕ್ಷ ರೂ. ಸುಲಿಗೆ ಮಾಡಿದ್ದ ಆರೋಪದ ಮೇಲೆ ಮಹಿಳೆ ಮತ್ತು ಆಕೆಯ ಸ್ನೇಹಿತನೊಬ್ಬನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

                   ಬಂಧಿತರನ್ನು ಗುಡಲೂರ್​ ಮೂಲದ ನಾಸೀಮಾ ಮತ್ತು ಆಕೆಯ ಸ್ನೇಹಿತ ಮುಹಮ್ಮದ್​ ಆಮೀನ್​ ಎಂದು ಗುರುತಿಸಲಾಗಿದೆ.ಈ ಘಟನೆ ಏಪ್ರಿಲ್ 5 ರಂದು ನಡೆದಿದೆ.

                 ಮಹಿಳೆ ಚಿಕಿತ್ಸೆಗಾಗಿ ಮೊದಲ ಬಾರಿಗೆ ವೈದ್ಯರನ್ನು ಭೇಟಿಯಾದರು. ಆ ಬಳಿಕ ತನಗೆ ಅನಾರೋಗ್ಯವಿದೆ ಎಂದು ಪಣಂಪಳ್ಳಿ ನಗರದಲ್ಲಿರುವ ತನ್ನ ಮನೆಗೆ ವೈದ್ಯರನ್ನು ಕರೆಸಿ ಮೊಬೈಲ್‌ನಲ್ಲಿ ತೆಗೆದ ಖಾಸಗಿ ಚಿತ್ರಗಳನ್ನು ತೋರಿಸಿ ಬ್ಲಾಕ್‌ಮೇಲ್ ಮಾಡಿದ್ದಾಳೆ. ವೈದ್ಯನ ಕಾರು ಮತ್ತು 4 ಸಾವಿರ ರೂಪಾಯಿಯನ್ನು ಕಸಿದುಕೊಂಡರು.

                ಮರುದಿನ ಕಾರನ್ನು ಹಿಂತಿರುಗಿಸಿ ಆತನಿಂದ 5 ಲಕ್ಷ ರೂ ಸುಲಿಗೆ ಮಾಡಿದರು. ಮತ್ತೆ 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಾಗ ವೈದ್ಯರು ಎರ್ನಾಕುಲಂ ಸೌತ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಬಳಿಕ ದೂರಿನ ಆಧಾರದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries