ಮಂಜೇಶ್ವರ: ಕರ್ನಾಟಕ ಇಂಧನ ಸಚಿವ, ಕಾರ್ಕಳ ಕ್ಷೇತ್ರದ ಬಿಜೆಪಿ ಉಮೇದ್ವಾರ ಸುನಿಲ್ ಕುಮಾರ್ ಕಾರ್ಕಳ ಅವರು ಭಾನುವಾರ ಮಂಜೇಶ್ವರದ ಶ್ರೀ ಮದ್ ಅನಂತೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಶ್ರೀ ದೇವರ ಆಶೀರ್ವಾದ ಪಡೆದರು.
ಮಂಜೇಶ್ವರ ಬಿಜೆಪಿ ವತಿಯಿಂದ ಹಾಗೂ ಕ್ಷೇತ್ರ ಆಡಳಿತ ಸಮಿತಿ ವತಿಯಿಂದ ಸುನಿಲ್ ಕುಮಾರ್ ಅವರನ್ನು ಸ್ವಾಗತಿಸಲಾಯಿತು. ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿಎಂ, ನೇತಾರರದ ಹರಿಶ್ಚಂದ್ರ ಎಂ, ಲೋಕೇಶ್ ನೋಂಡ, ಸುಪ್ರಿಯಾ ಶೆಣೈ, ನಿಶಾ ಭಟ್, ಲಕ್ಷ್ಮಣ್ ಕುಚ್ಚಿಕಾಡ್, ಚಂದ್ರಹಾಸ ಕಡಂಬಾರ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.