ಪೆರ್ಲ: ವಿಜ್ಞಾನ, ತಂತ್ರಜ್ಞಾನ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ನೀಡಿರುವ ಗಣನೀಯ ಸೇವೆಗಾಗಿ ಕರ್ನಾಟಕ ಸಾಂಸ್ಕøತಿಕ ಪರಿಷತ್ತು ಬೆಂಗಳೂರು, ನೀಡುವ 2023 ನೇ ಸಾಲಿನ ರಾಜ್ಯ ಮಟ್ಟದ ಡಾ.ಯಂ ವಿಶ್ವೇಶ್ವರಯ್ಯ ತಾಂತ್ರಿಕ" ಪ್ರಶಸ್ತಿಯನ್ನು ಪ್ರವೀಣ್ ಭಟ್ ಇವರು ಬೆಂಗಳೂರಿನಲ್ಲಿ ಸ್ವೀಕರಿಸಿದರು.
ಕಲಾ,ವಾಣಿಜ್ಯ,ತಾಂತ್ರಿಕ ಮತ್ತು ವಿಜ್ಞಾನ ವಿಷಯಗಳಲ್ಲಿ ಶಿಕ್ಷಣ ಪಡೆದ ಬಹುಮುಖ ಪ್ರತಿಭೆಯಾಗಿರುವ ಇವರು ಕಳೆದ 25 ವರ್ಷಕ್ಕೂ ಶೈಕ್ಷಣಿಕ ಸುದೀರ್ಘ ಅವಧಿಯಲ್ಲಿ ವೃತ್ತಿಪರ ಕೌಶಲಾಭಿವೃದ್ದಿ ಉಪನ್ಯಾಸಕರಾಗಿ,ಶೈಕ್ಷಣಿಕ,ಕಲಾ,ವೈಜ್ಞಾನಿಕ ಹಾಗೂ ತಾಂತ್ರಿಕ ಕ್ಷೇತ್ರದಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳ 1500ಕ್ಕೂ ಅಧಿಕ ಜಿಲ್ಲಾ ರಾಜ್ಯ ಮತ್ತು ರಾಷ್ಟ್ರ ಮಟ್ಟದ ವೈಜ್ಞಾನಿಕ ಮಾದರಿಗಳಿಗೆ ಮಾರ್ಗದರ್ಶಕರಾಗಿದ್ದರು.ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿರುವ, ಅಕ್ಕಮಹಾದೇವಿ ಸಭಾಂಗಣದಲ್ಲಿ ಏ 9 ರಂದು ನಡೆದ ಕರ್ನಾಟಕ ವೈಭವ ಕಾರ್ಯಕ್ರಮದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಸಾಹಿತಿಗಳ , ಗಣ್ಯರ ಉಪಸ್ಥಿತಿ ಯಲ್ಲಿ ಪ್ರಶಸ್ತಿ ಸ್ವೀಕರಿಸಿದರು. ಇವರು ಸ್ವರ್ಗ ಪರಿಕ್ಕಾನ ರಾಮ ಭಟ್-ರಾಧಾ ದಂಪತಿಗಳ ಪುತ್ರ.