HEALTH TIPS

ಹೆಚ್ಚಿನ ಉಸ್ತಾದ್‍ಗಳು ಕೇವಲ ಬಡವರು; ಮುಗ್ಧರು: ವ್ಯವಸ್ಥೆಯೇ ಅವರನ್ನು ಸೃಷ್ಟಿಸುತ್ತದೆ: ನಟ ಅಡ್ವಕೇಟ್ ಶುಕೂರ್ ಪ್ರತಿಕ್ರಿಯೆ


              ಮಲಪ್ಪುರಂ: ಉಮ್ರಾ ಯಾತ್ರೆ ನೆಪದಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ನಾಲ್ವರನ್ನು ಪೆÇಲೀಸರು ಬಂಧಿಸಿರುವ ಕುರಿತು ನಟ ಹಾಗೂ ವಕೀಲ ಶುಕೂರ್ ಪ್ರತಿಕ್ರಿಯಿಸಿದ್ದಾರೆ.
             ವಾಸ್ತವದಲ್ಲಿ ಹೆಚ್ಚಿನ ಉಸ್ತಾದ್‍ಗಳು ಕೇವಲ ಬಡವರು ಮತ್ತು ಹಳೆಯ ಕ್ರಮಗಳನ್ನೇ ಅನುಸರಿಸುವವರು. ಅವರು ಇಸ್ಲಾಂ ಕಟ್ಟುನಿಟ್ಟಾಗಿ ನಿಷೇಧಿಸಿರುವುದನ್ನು ಹಿಂಜರಿಕೆಯಿಲ್ಲದೆ ಜಾರಿ ಮಾಡುತ್ತಾರೆ ಮತ್ತು ಅದಕ್ಕೆ ಅನೇಕ ಮನ್ನಿಸುವಿಕೆಯನ್ನು ನೀಡುತ್ತಾರೆ. ಅವರ ಪಠ್ಯಕ್ರಮದಲ್ಲಿ ಪ್ರಜಾಪ್ರಭುತ್ವ, ಮಾನವ ಹಕ್ಕುಗಳು ಮತ್ತು ಲಿಂಗ ಸಮಾನತೆಯ ಆಧುನಿಕ ಅರ್ಥವಿಲ್ಲ. ಈ ಕಂಡೀಷನಿಂಗ್‍ನಿಂದ ಅವರು ಪವಿತ್ರ ಬಟ್ಟೆಗಳನ್ನು ಧರಿಸುವಂತೆ ಮತ್ತು ತಮ್ಮ ದೇಹದ ರಹಸ್ಯ ಭಾಗಗಳಲ್ಲಿ ಚಿನ್ನವನ್ನು ಕಳ್ಳಸಾಗಣೆ ಮಾಡುವಂತೆ ಮಾಡುತ್ತದೆ ಎಂದು ಶುಕೂರ್ ಹೇಳಿರುವರು.
             ವಾಸ್ತವವಾಗಿ ಹೆಚ್ಚಿನ ಉಸ್ತಾದ್‍ಗಳು ಕೇವಲ ಬಡವರು. ವಾಸ್ತವದಿಂದ ಓಡಿಹೋಗಿ ಮತ್ತೊಂದು ಸಮಾನಾಂತರ ಜಗತ್ತಿನಲ್ಲಿ ಬದುಕುವವರು. ಅವರು ಏನು ಕಲಿಯುತ್ತಿದ್ದಾರೆ ಮತ್ತು ಏನು ಹೇಳುತ್ತಾರೆಂದು ಅವರಿಗೆ ಖಚಿತವಾಗಿಲ್ಲ. ನಮ್ಮ ದೇಶದ ಬಗ್ಗೆ ಅಥವಾ ಇಲ್ಲಿನ ಕಾನೂನುಗಳ ಬಗ್ಗೆ ಹೆಚ್ಚು ತಿಳುವಳಿಕೆ ಇಲ್ಲ. ಹಿಂದೆ ನಡೆದ ಹಲವರ ಹಾದಿಯಲ್ಲೇ ಸಾಗುತ್ತಿದ್ದಾರೆ. ಯಾವುದೇ ಮರು ಮಾತುಕತೆ ಇಲ್ಲದೆ. ಇಸ್ಲಾಂನಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಲ್ಪಟ್ಟ ಕೆಲಸಗಳನ್ನು ಸಹ ಹಿಂಜರಿಕೆಯಿಲ್ಲದೆ ಮಾಡಲಾಗುತ್ತದೆ. ಅದಕ್ಕೆ ಕಾರಣಗಳನ್ನೂ ನೀಡುತ್ತಾರೆ. ಪೋಕ್ಸೋ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ಉಸ್ತಾದರು ಮಾತ್ರವಲ್ಲ, ಇನ್ನೂ ಅನೇಕ ಉದಾಹರಣೆಗಳಿವೆ. ಸ್ತ್ರೀದ್ವೇಷವು ಹೆಚ್ಚಿನ ಜನರ ನೆಚ್ಚಿನ ವಿಷಯವಾಗಿದೆ. ಪಿಎಚ್‍ಡಿ ಪಡೆದ ನಂತರವೇ ಸಾರ್ವಜನಿಕವಾಗಿ ಮಾತನಾಡುವ ಹಂತಕ್ಕೆ ಏರುವುದು. ಮಹಿಳಾ ಸ್ವಾತಂತ್ರ್ಯವನ್ನು ಭವ್ಯವಾಗಿ ಹೇಳಲಾಗುವುದು. ಸಾರ್ವಜನಿಕ ವೇದಿಕೆಗಳಲ್ಲಿ ಅಶ್ಲೀಲ ಮತ್ತು ಆಡಬಾರದ ವಿಷಯಗಳನ್ನು  ಜೋರಾಗಿ ಹೇಳಲು ಅವರಿಗೆ ಯಾವುದೇ ನಾಚಿಕೆ ಇಲ್ಲ.

             ಹೆಣ್ಣನ್ನು ಮನುಷ್ಯರಂತೆ ಕಾಣಲೂ ಹಿಂಜರಿಕೆ. ಮಹಿಳೆ ಎಂಬ ಕಾರಣಕ್ಕೆ ಪಂಚಾಯಿತಿ ಅಧ್ಯಕ್ಷರನ್ನು ವೇದಿಕೆ ಮೇಲೆ ಬಾರದಂತೆ ತಡೆಯುವ ಮನೋಸ್ಥಿತಿ, ಆ ಪ್ರಜ್ಞೆ ಎμÉ್ಟೂೀ ಜನರನ್ನು ಆಳುತ್ತಿದೆ. ಉಸ್ತಾದರು ಮುಗ್ಧರು, ವ್ಯವಸ್ಥೆಯೇ ಅವರನ್ನು ಸೃಷ್ಟಿಸುತ್ತದೆ. ಆಲಾವೃತರಾದ ಅವರನ್ನು ಆ ಕಂಪಾರ್ಟ್‍ಮೆಂಟ್‍ಗಳಿಂದ ಹೊರತೆಗೆದು ಗಾಳಿ ಮತ್ತು ಬೆಳಕು ನೀಡಿದರೆ ಅವರು ಉತ್ತಮ ಮನುಷ್ಯರಾಗುತ್ತಾರೆ ಎಂದು ಅಡ್ವಕೇಟ್ ಶುಕೂರ್ ಪೇಸ್‍ಬುಕ್‍ನಲ್ಲಿ ಬರೆದಿದ್ದಾರೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries