ಬದಿಯಡ್ಕ: ನೀರ್ಚಾಲು ಸಮೀಪದ ಪುದುಕೋಳಿಯಲ್ಲಿ ಮಂಗಳವಾರ ಸಂಜೆ ಆರಂಭಗೊಂಡು ಬುಧವಾರದ ವರೆಗೆ ವರ್ಷಾವಧಿ ದೈವಗಳ ಕೋಲ ನೆರವೇರಿತು.
ಮಂಗಳವಾರ ಶ್ರೀದುರ್ಗಾಪೂಜೆ, ದೈವಗಳ ತೊಡಂಙಲ್, ಧರ್ಮಪ್ರಸಾದ ವಿತರಣೆ ನಡೆಯಿತು. ಬುಧವಾರ ಮುಂಜಾನೆ ಈರ್ವರ್ ಉಳ್ಳಾಲ್ಕು ನೇಮ, ಬಳಿಕ ಶ್ರೀಧೂಮಾವತಿ ದೈವ ನೇಮ ಸಹಿತ ಪರಿವಾರ ದೈವಗಳ ನೇಮ ನಡೆದು, ಧರ್ಮದೈವ ಪಂಜುರ್ಲಿ ಕೋಲ ನೆರವೇರಿತು. ಪ್ರಸಾದ ವಿತರಣೆಯೊಂದಿಗೆ ಉತ್ಸವ ಸಮಾರೋಪಗೊಂಡಿತು. ಶ್ರೀಕೃಷ್ಣ ಭಟ್ ಪುದುಕೋಳಿ, ಗಣೇಶ್ ಭಟ್ ಪುದುಕೋಳಿ, ಗೋವಿಂದ ಭಟ್, ಶಂಕರ ಭಟ್ ಮೊದಲಾದವರು ನೇತೃತ್ವ ವಹಿಸಿದ್ದರು.