HEALTH TIPS

ನಿಮ್ಮಿಂದ ನಾವಿದನ್ನು ನಿರೀಕ್ಷಿಸಿರಲಿಲ್ಲ ಎಂದವರಿಗೆ ಪ್ರಧಾನಿ ಜತೆಗಿನ ಫೋಟೋ ಶೇರ್​ ಮಾಡಿ ನವ್ಯಾ ತಿರುಗೇಟು!

                ಎರಡು ದಿನಗಳ ಪ್ರವಾಸಕ್ಕಾಗಿ ಸೋಮವಾರ (ಏಪ್ರಿಲ್ 24) ಸಂಜೆ ಪ್ರಧಾನಿ ಮೋದಿ ದೇವರು ನಾಡು ಕೇರಳಕ್ಕೆ ಭೇಟಿ ನೀಡಿದರು. ಈ ವೇಳೆ ಕೊಚ್ಚಿಯಲ್ಲಿ ನಡೆದ ಯುವಂ 2023 ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಿದರು. ಉನ್ನಿ ಮುಕುಂದನ್​, ನವ್ಯಾ ನಾಯರ್​ ಮತ್ತು ಅಪರ್ಣಾ ಬಾಲಮುರಳಿ ಸೇರಿದಂತೆ ಮಲಯಾಳಂ ಚಿತ್ರರಂಗದ ಕಲಾವಿದರು ಸಹ ಮೋದಿ ಜೊತೆ ವೇದಿಕೆ ಹಂಚಿಕೊಂಡರು.

              ಮೋದಿ ಜತೆ ಮಲಯಾಳಂ ನಟ-ನಟಿಯರು ಇರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. ಕೆಲವರು ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದು, ನವ್ಯಾ ಅವರಿಂದ ನಾವು ಇದನ್ನು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ. ಇನ್ನು ಕೆಲವರು ಹಣಕ್ಕಾಗಿ ಅಪರ್ಣಾ ಬಾಲಮುರಳಿ ಮತ್ತು ನವ್ಯಾ ಅಂಥವರು ಕಾರ್ಯಕ್ರಮದಲ್ಲಿ ಭಾಗಹಿಸಿದ್ದಾರೆ ಎಂದು ಟೀಕೆ ಮಾಡಿದ್ದಾರೆ.          

                  ಜಾಲತಾಣದಲ್ಲಿ ಸಾಕಷ್ಟು ಟ್ರೋಲ್​ ಆದರೂ ಯಾವುದಕ್ಕೂ ಕ್ಯಾರೆ ಎನ್ನದ ನವ್ಯಾ ನಾಯರ್​, ಇದೀಗ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪ್ರಧಾನಿ ಮೋದಿ ಜತೆ ತೆಗೆಸಿಕೊಂಡಿರುವ ಫೋಟೋಗಳನ್ನು ಶೇರ್​ ಮಾಡಿದ್ದಾರೆ. ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಗಳೊಂದಿಗೆ ವೇದಿಕೆ ಹಂಚಿಕೊಂಡಿದ್ದು ನನ್ನ ಸೌಭಾಗ್ಯ ಎಂದು ಫೋಟೋಗಳಿಗೆ ಅಡಿಬರಹ ನೀಡುವ ಮೂಲಕ ಟ್ರೋಲಿಗರಿಗೆ ನವ್ಯಾ ತಿರುಗೇಟು ನೀಡಿದ್ದಾರೆ.

                  ನವ್ಯಾ ನಾಯರ್​ ಬಗ್ಗೆ ಕನ್ನಡಿಗರಿಗೆ ಹೆಚ್ಚಿಗೆ ಹೇಳಬೇಕಿಲ್ಲ. ಮಲಯಾಳಂ ಮೂಲದ ನಟಿಯಾದರೂ ಕನ್ನಡದಲ್ಲೂ ಮನೆ ಮಾತಾಗಿದ್ದಾರೆ. ಅದಕ್ಕೆ ಕಾರಣ ಅವರು ಕನ್ನಡ ನೆಲದಲ್ಲಿ ಕೊಟ್ಟಂತಹ ಸೂಪರ್​ ಹಿಟ್​ ಸಿನಿಮಾಗಳು. ದರ್ಶನ್​ ಅಭಿನಯದ ಗಜ ಹಾಗೂ ರವಿಚಂದ್ರನ್​ ಜೊತೆ ದೃಶ್ಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಷ್ಟೇ ಅಲ್ಲದೆ, ಬಾಸ್​ ದೃಶ್ಯ-2, ನಮ್ಮ ಯಜಮಾನರು ಸೇರಿದಂತೆ ಕೆಲ ಸಿನಿಮಾಗಳಲ್ಲಿ ನವ್ಯಾ ನಟಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries