ತಿರುವನಂತಪುರಂ: ಮಗಳ ಸ್ನೇಹಿತೆಗೆ ಕಿರುಕುಳ ನೀಡಿದ ಪ್ರಕರಣದಲ್ಲಿ 45 ವರ್ಷದ ವ್ಯಕ್ತಿಗೆ ಪೋಕ್ಸೊ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಪಶುಪ್ಪಕಡವು ನಿವಾಸಿ ಹಮೀದ್ ಎಂಬಾತನಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಆತನಿಗೆ ಐದು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಲಾಗಿದೆ.
ಘಟನೆ 2021 ರಲ್ಲಿ ನಡೆದಿತ್ತು. ಹಮೀದ್ ತನ್ನ ಪುತ್ರಿಯ ವಿವಾಹ ಕರೆಯೋಲೆ ನೀಡಲು ಪುತ್ರಿಯ ಸ್ನೇಹಿತೆಯ ಮನೆಗೆ ತೆರಳಿದ್ದ ವೇಳೆ ನಡೆದ ಘಟನೆಯನ್ನಾದರಿಸಿ ಈ ಶಿಕ್ಷೆ ನೀಡಲಾಗಿದೆ. ಆರೋಪಿ ತನ್ನ ಮಗಳ ಮದುವೆಗೆ ಆಹ್ವಾನಿಸಲು ಪುತ್ರಿಯ ಸ್ನೇಹಿತೆಯ ಮನೆಗೆ ತೆರಳಿದ್ದ. ಆ ವೇಳೆ ಬಾಲಕಿ ಮಾತ್ರ ಮನೆಯಲ್ಲಿದ್ದಳು. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಅರಿತ ಆರೋಪಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆರೋಪಿಯು ಬಾಲಕಿಯನ್ನು ಮನೆಯೊಳಗೆ ಎಳೆದೊಯ್ದು ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದು, ಸಂತ್ರಸ್ತೆ ತನ್ನ 17 ವರ್ಷದ ಮಗಳ ಸ್ನೇಹಿತೆಯಾಗಿದ್ದು, ಮನೆಯಲ್ಲಿ ಒಬ್ಬಳೇ ಇದ್ದಳು. ನಾದಪುರಂ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಂತರ ಪೋಷಕರು ಬಂದಾಗ ಬಾಲಕಿ ತನಗೆ ಕಿರುಕುಳ ನೀಡಿರುವುದಾಗಿ ತಿಳಿಸಿದ್ದಾಳೆ. ಬಳಿಕ ಪೊಲೀಸರಿಗೆ ದೂರು ನೀಡಿದ್ದರು. ನಂತರ ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಆರೋಪಿಯು ಮದುವೆ ನಿಶ್ಚಯವಾಗಿರುವ ಹುಡುಗಿಯ ತಂದೆ ತಾನೆ ಎಂದು ವಾದ ಮಂಡಿಸಿದ್ದರು. ಇದೀಗ ಶಿಕ್ಷೆಯನ್ನು ಪ್ರಕಟಿಸಿದ ನ್ಯಾಯಾಲಯದ ತೀರ್ಪು ತೀವ್ರ ಪ್ರತಿಕ್ರಿಯೆಗಳನ್ನು ನೀಡಿದೆ.
ಮಗಳ ಸ್ನೇಹಿತೆಯನ್ನೇ ದೌರ್ಜನ್ಯಗೈದ ಆರೋಪಿಗೆ ಐದು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ದಂಡ
0
ಏಪ್ರಿಲ್ 02, 2023