ನವದೆಹಲಿ : ರೈಲು ಪ್ರಯಾಣ ಬಡವರು ಮತ್ತು ಮಧ್ಯಮ ವರ್ಗದವರಿಗೆ ಅಷ್ಟೇ ಅಲ್ಲ ಶ್ರೀಮಂತರಿಗೂ ಅನುಕೂಲಕರ. ಸಧ್ಯ ರೈಲಿನಲ್ಲಿ ಪ್ರಯಾಣಿಸುವ ಕೋಟ್ಯಂತರ ಪ್ರಯಾಣಿಕರಿಗೆ ಸಂತಸದ ಸುದ್ದಿ ಸಿಕ್ಕಿದೆ. ನೀವೂ ಸಹ ಪದೇ ಪದೇ ರೈಲು ಪ್ರಯಾಣಿಸುವವರಾಗಿದ್ದರೆ, ಈ ಮಾಹಿತಿಯು ನಿಮಗೆ ಸಹ ಉಪಯುಕ್ತವಾಗಿರುತ್ತದೆ. ಯಾಕಂದ್ರೆ, ಈಗ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ವಿಶೇಷ ಸೌಲಭ್ಯ ಕಲ್ಪಿಸಲಿದೆ.
ಭಾರತೀಯ ರೈಲ್ವೆಯು ಕಾಲಕಾಲಕ್ಕೆ ರೈಲು ಪ್ರಯಾಣಿಕರಿಗೆ ಅನೇಕ ಉಚಿತ ಸೌಲಭ್ಯಗಳನ್ನ ಒದಗಿಸುತ್ತದೆ. ಸಧ್ಯ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಕೆಲವು ಮಾಹಿತಿ ನೀಡಿದ್ದಾರೆ. ಇನ್ಮುಂದೆ ರೈಲಿನಲ್ಲಿ ಪ್ರಯಾಣಿಕರಿಗೆ ಉಚಿತ ಆಹಾರ ನೀಡಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಬಹಿರಂಗಪಡಿಸಿದ್ದಾರೆ. ಹೌದು, ಈಗ ನೀವೂ ರೈಲಿನಲ್ಲಿ ಪ್ರಯಾಣಿಸಲು ಹೋದರೆ ನಿಮಗೆ ಉಚಿತ ಆಹಾರ ಸಿಗಬೋದು. ಹಾಗಿದ್ರೆ, ರೈಲ್ವೇ ನೀಡುವ ಈ ಉಚಿತ ಆಹಾರ ಸೌಲಭ್ಯ ಪಡೆದುಕೊಳ್ಳುವುದು ಹೇಗೆ.?
ಹೊಸ ನಿಯಮದ ಪ್ರಕಾರ ರೈಲಿನಲ್ಲಿ ಪ್ರಯಾಣಿಸುವಾಗ ಊಟಕ್ಕೆ ಹಣ ನೀಡಬೇಕಿಲ್ಲ. ರೈಲ್ವೇ ಮೂಲಕ ಪ್ರಯಾಣಿಕರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನ ಒದಗಿಸಲಾಗಿದೆ. ಆದ್ರೆ, ಈ ಹಿಂದೆ ಇರದ ಹೊಸ ಸೌಲಭ್ಯವನ್ನ ಈಗ ರೈಲ್ವೆ ತಂದಿದೆ.
ಹೆಚ್ಚಿನ ಸಂದರ್ಭಗಳಲ್ಲಿ, ರೈಲು ವಿಳಂಬವಾಗುವುದು ಸಾಮಾನ್ಯ. ಆದ್ರೆ, ಈಗ ನಿಮ್ಮ ರೈಲು ತಡವಾದರೆ ರೈಲ್ವೆ ಇಲಾಖೆ ನಿಮಗೆ ಊಟದ ಸೌಲಭ್ಯ ಕಲ್ಪಿಸುತ್ತದೆ. ವಿಳಂಬದ ಪರಿಣಾಮವಾಗಿ ಪ್ರಯಾಣಿಕರಿಗೆ ಉಚಿತ ಆಹಾರವನ್ನ ನೀಡಲಾಗುತ್ತದೆ. ರೈಲ್ವೆ ಕೆಲವು ವಿಶೇಷ ಪ್ರಯಾಣಿಕರಿಗೆ ಉಚಿತ ಆಹಾರ ಸೌಲಭ್ಯವನ್ನ ಒದಗಿಸುತ್ತದೆ.
IRCTC ನಿಯಮ ಏನು ಗೊತ್ತಾ?
IRCTC ನಿಯಮಗಳ ಪ್ರಕಾರ, ಪ್ರಯಾಣಿಕರಿಗೆ ಉಚಿತ ಊಟವನ್ನ ನೀಡಲಾಗುತ್ತದೆ. ನಿಮ್ಮ ರೈಲು 2
ಗಂಟೆ ಅಥವಾ ಅದಕ್ಕಿಂತ ಹೆಚ್ಚು ವಿಳಂಬವಾದಾಗ ಊಟವನ್ನ ಒದಗಿಸಲಾಗುತ್ತದೆ. ಇಲ್ಲವಾದಲ್ಲಿ
ಎಕ್ಸ್ ಪ್ರೆಸ್ ರೈಲು ಪ್ರಯಾಣಿಕರಿಗೆ ಮಾತ್ರ ಈ ಸೌಲಭ್ಯ ಕಲ್ಪಿಸಲಾಗುವುದು. ಶತಾಬ್ದಿ,
ರಾಜಧಾನಿ, ದುರಂತೋ ಮುಂತಾದ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಪ್ರಯಾಣಿಸುವವರಿಗೆ ಈ
ಮಾಹಿತಿಯು ತುಂಬಾ ಉಪಯುಕ್ತವಾಗಿದೆ.
ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಸೌಲಭ್ಯ ಕೂಡ.!
ರೈಲ್ವೆ ಮಾಹಿತಿ ಪ್ರಕಾರ, ಆನ್‌ಲೈನ್ ವೆಬ್‌ಸೈಟ್ ಮೂಲಕ ಟಿಕೆಟ್ ಕಾಯ್ದಿರಿಸುವವರಿಗೂ ಈ
ಸೌಲಭ್ಯವನ್ನ ಒದಗಿಸಲಾಗಿದೆ. ಇನ್ನು ಯಾವುದೇ ಕಾರಣಕ್ಕಾಗಿ ನೀವು ರೈಲು
ತಪ್ಪಿಸಿಕೊಂಡರೆ, ನೀವು ಮರುಪಾವತಿ ಪಡೆಯಬಹುದು. ಇದಕ್ಕಾಗಿ ರೈಲು ನಿಲ್ದಾಣದಿಂದ ಹೊರಟ 1
ಗಂಟೆಯೊಳಗೆ ಟಿಡಿಆರ್ ಫಾರ್ಮ್ ಭರ್ತಿ ಮಾಡಿ ಟಿಕೆಟ್ ಕೌಂಟರ್'ನಲ್ಲಿ ಸಲ್ಲಿಸಬೇಕು.