ನವದೆಹಲಿ: ಹೊಸ ಸಂವಿಧಾನ ಕರಡು ವಿಷಯ ಸೇರಿದಂತೆ ಸಂಸದೀಯ ಪ್ರಜಾಪ್ರಭುತ್ವದಲ್ಲಿನ ಭಾರತದ ಅನುಭವದಿಂದ ದಕ್ಷಿಣ ಸುಡಾನ್ ಪ್ರಯೋಜನ ಪಡೆಯಬಹುದು. ಈ ಪ್ರಕ್ರಿಯೆಯಲ್ಲಿ ಭಾರತ ಸಂಪೂರ್ಣ ಬೆಂಬಲ ನೀಡಲಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.
ಭಾರತಕ್ಕೆ ಆಗಮಿಸಿರುವ ದಕ್ಷಿಣ ಸುಡಾನ್‌ನ ಸಂಸದೀಯ ನಿಯೋಗವನ್ನು ಸ್ವಾಗತಿಸಿದ ಅವರು ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗೆ ಸುಡಾನ್ ನೀಡುತ್ತಿರುವ ಕೊಡುಗೆಗೆ ಭಾರತ ಹೆಮ್ಮೆ ಪಡುತ್ತದೆ ಎಂದರು.
ಭಾರತ ಮತ್ತು ಸುಡಾನ್ ನಡುವಿನ ಸೌಹಾರ್ದ ಮತ್ತು ಸ್ನೇಹ ಸಂಬಂಧಗಳ ಬಗ್ಗೆ ಮುರ್ಮು ಒತ್ತಿ ಹೇಳಿದರು. ಶಾಂತಿ ಕಾರ್ಯಾಚರಣೆ ಸೇರಿದಂತೆ ಉಭಯ ದೇಶಗಳ ನಡುವಿನ ಸಂಬಂಧವನ್ನು ಹೆಚ್ಚಿಸಲು ನಮ್ಮ ಸೈನಿಕರು ಕೊಡುಗೆ ನೀಡುತ್ತಿದ್ದಾರೆ ಎಂದರು.