ಕುಂಬಳೆ : ಬಂಬ್ರಾಣ ನೀಲಪ್ಪಾಡಿ ಶಾಂತ ಆಳ್ವ (89) ದೀರ್ಘ ಕಾಲದ ಅಸೌಖ್ಯದಿಂದ ನಿನ್ನೆ ರಾತ್ರಿ ನೀಲಪ್ಪಾಡಿಯ ತಮ್ಮ ಸ್ವಗೃಹದಲ್ಲಿ ನಿಧನರಾದರು.ಇವರು ಸುಮಾರು35 ವರ್ಷಗಳಿಂದ ಕುಂಬಳೆ ಉಪಜಿಲ್ಲೆಯ ವಿವಿಧ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಅಧ್ಯಾಪನ ಸೇವೆಯನ್ನು ಮಾಡಿದ್ದರು.ಮೃತರು ಓರ್ವ ಉತ್ತಮ ನಾಟಕ ಕಲಾವಿದರಾಗಿದ್ದು ಊರು ಮತ್ತು ಪರವೂರುಗಲ್ಲಿ ನಡೆಯುತ್ತಿದ್ದ ನಾಟಕಗಳಲ್ಲಿ ಅತಿಥಿ ಕಲಾವಿದರಾಗಿ ಪಾತ್ರ ನಿರ್ವಹಿಸುತ್ತಿದ್ದರು.
ಇವರು ಕೃಷಿಕರಾಗಿದ್ದು ಪಂಚಾಯತಿನಿಂದ ಉತ್ತಮ ಕೃಷಿಕ ಪ್ರಶಸ್ತಿಯನ್ನು ಪಡೆದಿದ್ದರು.
ಮೃತರು ಪತ್ನಿ ಸುಭಾಷಿಣಿ ,ಮಕ್ಕಳಾದ ಡಾ.ನಂದಕಿಶೋರ್ ಆಳ್ವ, ಪ್ರೀತಮ್ ಆಳ್ವ ಮತ್ತು ಡಾ. ಅಪರ್ಣ ಆಳ್ವ ಅಳಿಯ ಶಿಕ್ಷಕ ,ಸಾಹಿತಿ ಹರೀಶ್ ಸುಲಾಯ ಒಡ್ಡಂಬೆಟ್ಟು ಮತ್ತು ಸೊಸೆ ಸುಚಿತ್ರ ಇವರನ್ನು ಅಗಲಿದ್ದಾರೆ.
ನಿವೃತ್ತ ಶಿಕ್ಷಕ ಹವ್ಯಾಸಿ ನಾಟಕ ಕಲಾವಿದ ನೀಲಪ್ಪಾಡಿ ಶಾಂತ ಆಳ್ವ ನಿಧನ
0
ಏಪ್ರಿಲ್ 09, 2023