ನವದೆಹಲಿ: ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆಗಾಗಿ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿರುವುದಾಗಿ ಕೇಂದ್ರ ಸರ್ಕಾರ ಭಾನುವಾರ ಸ್ಪಷ್ಟಪಡಿಸಿದೆ.
ನವದೆಹಲಿ: ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆಗಾಗಿ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿರುವುದಾಗಿ ಕೇಂದ್ರ ಸರ್ಕಾರ ಭಾನುವಾರ ಸ್ಪಷ್ಟಪಡಿಸಿದೆ.
ಭಾರತೀಯರ ಸುರಕ್ಷಿತ ವಾಪಸಾತಿಗಾಗಿ ಸುಡಾನ್, ಸೌದಿ ಅರೇಬಿಯಾ, ಯುಎಇ, ಈಜಿಪ್ಟ್ ಮತ್ತು ಅಮೆರಿಕದೊಂದಿಗೆ ಸಂಪರ್ಕದಲ್ಲಿರುವುದಾಗಿ ಸರ್ಕಾರ ತಿಳಿಸಿದೆ.
ಸುಡಾನ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯೂ ಭಾರತೀಯರೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಭಾರತೀಯ ವಾಯುಪಡೆಯ C-130J ವಿಮಾನಗಳು ಜಿದ್ದಾದಲ್ಲಿ ಉಳಿದುಕೊಂಡಿದ್ದು, ಸನ್ನದ್ಧು ಸ್ಥಿತಿಯಲ್ಲಿವೆ. ನೌಕಾ ಪಡೆಯ ಐಎನ್‌ಎಸ್ ಸುಮೇಧಾ ಸುಡಾನ್ ಬಂದರು ತಲುಪಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.
ಸುಡಾನ್ ವಾಯುಪ್ರದೇಶದಲ್ಲಿ ವಿದೇಶಿ ವಿಮಾನಗಳಿಗೆ ಈಗಲೂ ನಿಷೇಧವಿದೆ. ರಸ್ತೆ ಮಾರ್ಗದ ಪ್ರಯಾಣ ಅಪಾಯಕಾರಿಯಾಗಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.