ತ್ರಿಸ್ಸೂರ್: ಮೊಬೈಲ್ ಸ್ಫೋಟಗೊಂಡು 8 ವರ್ಷದ ಬಾಲಕಿ ದುರಂತ ಸಾವಿಗೀಡಾಗಿರುವ ಘಟನೆ ಕೇರಳದ ತ್ರಿಸ್ಸೂರ್ ಜಿಲ್ಲೆಯ ತಿರುವಿಲವಮಲದಲ್ಲಿ ನಡೆದಿದೆ.
ವಿಡಿಯೋ ನೋಡುವಾಗ ಮೊಬೈಲ್ ಸ್ಫೋಟ: ದಂಪತಿಯ ಒಬ್ಬಳೇ ಮುದ್ದಿನ ಪುತ್ರಿ ಸಾವು
0
ಏಪ್ರಿಲ್ 26, 2023
Tags
ತ್ರಿಸ್ಸೂರ್: ಮೊಬೈಲ್ ಸ್ಫೋಟಗೊಂಡು 8 ವರ್ಷದ ಬಾಲಕಿ ದುರಂತ ಸಾವಿಗೀಡಾಗಿರುವ ಘಟನೆ ಕೇರಳದ ತ್ರಿಸ್ಸೂರ್ ಜಿಲ್ಲೆಯ ತಿರುವಿಲವಮಲದಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ಆದಿತ್ಯಶ್ರೀ ಎಂದು ಗುರುತಿಸಲಾಗಿದೆ. ಪಟ್ಟಿಪರಂಬು ಕುನ್ನತು ವಿತ್ತಿಲ್ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಅಶೋಕ್ ಕುಮಾರ್ ಮತ್ತು ಸೌಮ್ಯ ದಂಪತಿಯ ಒಬ್ಬಳೇ ಪುತ್ರಿ.
ಈ ಘಟನೆ ಕಳೆದ ರಾತ್ರಿ ನಡೆದಿದೆ. ಮೊಬೈಲ್ ಅನ್ನು ಚಾರ್ಜ್ ಹಾಕಿದ್ದ ವೇಳೆ ಆದಿತ್ಯಶ್ರೀ ವಿಡಿಯೋ ನೋಡುತ್ತಿದ್ದಳು. ಈ ವೇಳೆ ಮೊಬೈಲ್ ಸ್ಫೋಟಗೊಂಡು ಆಕೆ ದುರ್ಮರಣಕ್ಕೀಡಾಗಿದ್ದಾಳೆ. ಸ್ಫೋಟದ ಸದ್ದು ನಮಗೂ ಕೇಳಿಸಿತು ಎಂದು ನೆರೆ ಮನೆಯವರು ಹೇಳಿದ್ದಾರೆ.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪಳೆಯನ್ನೂರು ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಆದಿತ್ಯಾಶ್ರೀ ಮೃತದೇಹವನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.