ತಿರುವನಂತಪುರಂ: ರಾಜ್ಯದಲ್ಲಿ ಈ ವರ್ಷ ಇದುವರೆಗಿನ ದಾಖಲೆಯ ಬಿಸಿ ಬುಧವಾರ ದಾಖಲಾಗಿದೆ.
ಕೇಂದ್ರ ಹವಾಮಾನ ಇಲಾಖೆಯ ಅಧಿಕೃತ ಥರ್ಮಾಮೀಟರ್‍ಗಳಿಂದ ದಾಖಲೆಯ ತಾಪಮಾನ ದಾಖಲಾಗಿದೆ. ಸ್ವಯಂಚಾಲಿತ ಹವಾಮಾನ ಕೇಂದ್ರಗಳು ಕೆಲವು ಸ್ಥಳಗಳಲ್ಲಿ 40 ಡಿಗ್ರಿಗಿಂತಲೂ ಹೆಚ್ಚಿನ ತಾಪಮಾನವನ್ನು ದಾಖಲಿಸಿದೆ.
ಪಾಲಕ್ಕಾಡ್ ಮತ್ತು ಕರಿಪ್ಪೂರ್ ವಿಮಾನ ನಿಲ್ದಾಣದಲ್ಲಿ ಈ ವರ್ಷ ಗರಿಷ್ಠ ತಾಪಮಾನ ದಾಖಲಾಗಿದೆ. ಎರಡೂ ಸ್ಥಳಗಳಲ್ಲಿ 39 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಕಣ್ಣೂರು ಮತ್ತು ಪಾಲಕ್ಕಾಡ್‍ನಲ್ಲಿ ಈ ವರ್ಷದ ಅತ್ಯಧಿಕ ತಾಪಮಾನ (38.6ಡಿಗ್ರಿ) ದಾಖಲಾಗಿದೆ.
ರಾಜ್ಯದಲ್ಲಿ ಇಂದೂ ಅತ್ಯಧಿಕ ಸರಾಸರಿ ತಾಪಮಾನವನ್ನು (36.2 ಡಿಗ್ರಿ) ದಾಖಲಿಸಿದೆ. ಇದೇ ವೇಳೆ ಸ್ವಯಂಚಾಲಿತ ಹವಾಮಾನ ಕೇಂದ್ರಗಳು ಅನೇಕ ಸ್ಥಳಗಳಲ್ಲಿ 40 ಡಿಗ್ರಿ ಗಿಂತ ಹೆಚ್ಚಿನ ತಾಪಮಾನವನ್ನು ದಾಖಲಿಸಿದೆ. ಕಣ್ಣೂರು ಚಂಬೇರಿಯಲ್ಲಿ 41.3 ಡಿಗ್ರಿ ಸೆಲ್ಸಿಯಸ್ ಉμÁ್ಣಂಶ ದಾಖಲಾಗಿದೆ.
ರಾಜ್ಯದಲ್ಲಿ ಈ ವರ್ಷ ಇದುವರೆಗೆ ದಾಖಲೆಯ ಉಷ್ಣತೆ
0
ಏಪ್ರಿಲ್ 13, 2023