ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯ ಕಾಸರಗೋಡು ಕ್ಯಾಂಪಸ್ ತನ್ನ ಮೊದಲ ಗೌರವ ಡಾಕ್ಟರೇಟ್ ಪದವಿಯನ್ನು ಭಾರತೀಯ ಕ್ರೀಡಾ ಪ್ರತಿಭೆ, ರಾಜ್ಯ ಸಭಾ ಸದಸ್ಯೆ ಹಾಗೂ ಭಾರತೀಯ ಒಲಿಂಪಿಕ್ಸ್ ಸಂಘದ ಅಧ್ಯಕ್ಷೆ ಪಿ.ಟಿ. ಉಷಾ ಅವರಿಗೆ ಸೋಮವಾರ ಪ್ರದಾನ ಮಾಡಿದೆ. ಈ ಮೂಲಕ ಓಟದ ರಾಣಿ ಪಿ.ಟಿ ಉಷಾ ಅವರು ಡಾಕ್ಟರ್ ಪಿ.ಟಿ ಉಷಾ ಆಗಿ ಗುರುತಿಸಲ್ಪಡಲಿದ್ದಾರೆ.
ಕಾಸರಗೋಡು ಪೆರಿಯ ಕ್ಯಾಂಪಸ್‍ನ ಸಬರಮತಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಉಪಕುಲಪತಿ ಪ್ರೊ. ಎಚ್. ವೆಂಕಟೇಶ್ವರಲು ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. ಈ ಸಂದರ್ಭ ಮಾತನಾಡಿದ ಅವರು, ಭಾರತೀಯ ಕ್ರೀಡಾರಂಗದ ತಾರೆ ಪಿ.ಟಿ ಉಷಾ ದೇಶದ ಹೆಮ್ಮೆಯ ಪುತ್ರಿಯಾಗಿದ್ದಾರೆ. ರಾಷ್ಟ್ರಕ್ಕೆ ಆದರ್ಶಪ್ರಾಯರಾದವರನ್ನು ಗುರುತಿಸುವುದು ಕೇಂದ್ರೀಯ ವಿಶ್ವ ವಿದ್ಯಾಲಯದ ಕರ್ತವ್ಯವಾಗಿದೆ. ಪಿ.ಟಿ ಉಷಾ ಅವರ ಜೀವನ ಮತ್ತು ಅವರ ಸಾಧನೆ ವಿದ್ಯಾರ್ಥಿಗಳಿಗೆ ಮಾದರಿಯಾಗಿರುವುದಾಗಿ ತಿಳಿಸಿದರು.
ಗೌರವ ಡಾಕ್ಟರೆಟ್ ಪದವಿ ಸ್ವೀಕರಿಸಿ, ಮಾತನಾಡಿ ನಮ್ಮ ಧ್ಯೇಯದ ಕಡೆ ಗಮನವಿರಿಸಿ ಕಾರ್ಯಪ್ರವೃತ್ತರಾದಾಗ ಗುರಿ ಮುಟ್ಟಲು ಸಾದ್ಯ. ಇದಕ್ಕೆ ಪ್ರತಿಯೊಬ್ಬರೂ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಈ ಸಂದರ್ಭ ಲಾಸ್ ಏಂಜಲೀಸ್ ಒಲಿಂಪಿಕ್ಸ್‍ನಲ್ಲಿ ಕೂದಲೆಳೆಯ ಅಂತರದಲ್ಲಿ ಪದಕ ನಷ್ಟಗೊಂಡ ಬಗ್ಗೆ ಭಾವುಕರಾದರು.
ಡೀನ್ ಅಕಾಡೆಮಿಕ್ ಪೆÇ್ರಫೆಸರ್ ಅಮೃತ್ ಜಿ ಕುಮಾರ್ ಮತ್ತು ವಿಶೇಷ ಕರ್ತವ್ಯದ ಅಧಿಕಾರಿ ರಾಜೇಂದ್ರ ಪಿಲಾಂಗಟ್ಟೆ ಉಪಸ್ಥಿತರಿದ್ದರು. ರಿಜಿಸ್ಟ್ರಾರ್ ಡಾ.ಎಂ.ಮುರಳೀಧರನ್ ನಂಬಿಯಾರ್ ಸ್ವಾಗತಿಸಿದರು. ಪ್ರಬಾರ ಪರೀಕ್ಷಾ ನಿಯಂತ್ರಕ ಪೆÇ್ರ. ಎಂ.ಎನ್. ಮುಸ್ತಫಾ ವಂದಿಸಿದರು. ಡೀನ್‍ಗಳು, ವಿಭಾಗದ ಮುಖ್ಯಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದಿ ಪಾಲ್ಗೊಮಡಿದ್ದರು. ಕ್ರೀಡಾ ಕ್ಷೇತ್ರಕ್ಕೆ ನೀಡಿದ ವಿಶೇಷ ಕೊಡುಗೆ ಪರಿಗಣಿಸಿ ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿಯನ್ನು ಪಿ.ಟಿ ಉಷಾ ಅವರಿಗೆ ನೀಡಿದೆ.
ಓಟದ ರಾಣಿ ಪಿ.ಟಿ ಉಷಾ ಇನ್ನು ಮುಂದೆ 'ಡಾಕ್ಟರ್ ಪಿ.ಟಿ ಉಷಾ': ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಮೊದಲ ಗೌರವ ಡಾಕ್ಟರೇಟ್ ಪದವಿ ಪ್ರದಾನ
0
ಏಪ್ರಿಲ್ 10, 2023