ಕಾಸರಗೋಡು : ಕುಂಬಳೆ ಸನಿಹದ ನಾರಾಯಣಮಂಗಲ ಶ್ರೀ ವಿಘ್ನೇಶ್ವರ ಯಕ್ಷಗಾನ ಸಂಘದ ಸುವರ್ಣ ಮಹೋತ್ಸವದ ಅಂಗವಾಗಿ ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಆಯ್ದ ವಿದ್ಯಾರ್ಥಿಗಳ ತಂಡಗಳಿಗೆ ಯಕ್ಷಗಾನ ತಾಳಮದ್ದಳೆ ಪ್ರಸ್ತುತಪಡಿಸಲು ಅವಕಾಶ ಒದಗಿಸುವುದಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಮೇ 28ರಂದು ಬೆಳಗ್ಗೆ 9.00ರಿಂದ ಸಂಜೆ 4.00ರ ತನಕ ಕುಂಬಳೆ ನಾಯ್ಕಾಪಿಗೆ ಸಮೀಪದ ಮುಂಡಪಳ್ಳ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಠಾರದಲ್ಲಿ ತಾಳಮದ್ದಳೆ ಕಾರ್ಯಕ್ರಮ ನಡೆಯಲಿದೆ.
ಒಂದು ತಂಡಕ್ಕೆ ಒಂದು ಗಂಟೆ ಕಾಲಾವಕಾಶ ನೀಡಲಾಗುವುದು. ಹಿಮ್ಮೇಳ ಪರಿಕರಗಳ ಪೈಕಿ ಮದ್ದಳೆ ಹೊರತುಪಡಿಸಿ ಉಳಿದೆಲ್ಲವುಗಳನ್ನು ಸ್ಥಳದಲ್ಲಿ ಒದಗಿಸಲಾಗುವುದು.ಸ್ನಾತಕೋತ್ತರ ಪದವಿಯ ವರೆಗಿನ ವಿದ್ಯಾರ್ಥಿಗಳು ತಂಡದಲ್ಲಿ ಪಲ್ಗೊಳ್ಳಬಹುದಾಗಿದೆ. ಭಾಗವತರು, ಹಿಮ್ಮೇಳ ನುಡಿಸುವವರು, ಪಾತ್ರಧಾರಿಗಳು ಎಲ್ಲರೂ ವಿದ್ಯಾರ್ಥಿಗಳೇ ಆಗಿದ್ದರೆ ಉತ್ತಮ. ಪಾತ್ರಧಾರಿಗಳ ಸಂಖ್ಯೆ ಗರಿಷ್ಠ 7 ಆಗಿರುತ್ತದೆ. (ತಂಡದ ಒಟ್ಟು ಸದಸ್ಯರ ಗರಿಷ್ಠ ಸಂಖ್ಯೆ 14) ಭಾಗವಹಿಸುವ ಎಲ್ಲ ತಂಡಗಳಿಗೆ ಸ್ಮರಣಿಕೆ ಮತ್ತು ರೂ. ಒಂದು ಸಾವಿರ ನಗದು ಪೆÇ್ರೀತ್ಸಾಹಕ ಧನ ನೀಡಲಾಗುವುದು. ತಂಡದ ಎಲ್ಲ ಸದಸ್ಯರಿಗೆ ಪಾಲ್ಗೊಳ್ಳುವಿಕೆ ಪ್ರಮಾಣಪತ್ರ ನೀಡಲಾಗುವುದು. ನಿಬಂಧನೆಗಳಿಗನುಸಾರವಾಗಿ ಮೊದಲು ಅರ್ಜಿ ಸಲ್ಲಿಸಿದವರಿಗೆ ಮೊದಲು ಅವಕಾಶ ಎಂಬ ಆಧಾರದಲ್ಲಿ ಒಟ್ಟು ಐದು ತಂಡಗಳನ್ನು ಆಯ್ಕೆ ಮಾಡಲಾಗುವುದು.
ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವ ತಂಡಗಳು ಮೇ 15ಕ್ಕೆ ಮುಂಚಿತವಾಗಿ ಸಂಘದ ಕಾರ್ಯದರ್ಶಿ ಕೇಶವ ಭಟ್ ಕಂಬಾರು ಇವರಿಗೆ ತಲುಪುವಂತೆ ಪತ್ರ ಮುಖೇನ ಅಥವಾ ವಾಟ್ಸಪ್ ಮುಖಾಂತರ ಕಳುಹಿಸಿಕೊಡುವುದು. ತಂಡದ ಹೆಸರು, ವಿಳಾಸ, ಸಂಪರ್ಕ ದೂರವಾಣಿ, ವಾಟ್ಪಪ್ ಸಂಖ್ಯೆ, ತಂಡದ ಸದಸ್ಯರ ಹೆಸರು ಮತ್ತು ಅವರು ಕಲಿಯುವ ತರಗತಿ ಯಾ ಹಂತ ಸೂಚಿಸಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮತ್ತು ತಂಡದ ವಿವರ ಕಳುಹಿಸಿಕೊಡುವುದಕ್ಕಾಗಿ ವಾಟ್ಸಪ್ sಸಂಖ್ಯೆ(7012697126)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.