ತಿರುವನಂತಪುರಂ: ಆದಿ ಶಂಕರರ ನಂತರ ಭಾರತದಾದ್ಯಂತ ಅದೇ ರೀತಿ ಕಾಲ್ನಡಿಗೆಯಲ್ಲಿ ಸಂಚರಿಸಿ ಸಾಧನೆಗೈದವರು ರಾಹುಲ್ ಗಾಂಧಿ ಎಂದು ಕೇರಳದ ಕಾಂಗ್ರೆಸ್ ಮುಖಂಡ ಪಿ.ಜೆ.ಕುರಿಯನ್ ಹೇಳಿದ್ದಾರೆ.
ಆದಿ ಶಂಕರನ ನಂತರ ಯಾರಾದರೂ ರಾಹುಲ್‍ನಂತೆ ನಡೆದಿದ್ದಿದೆಯಾ, ಇತರರು ವಾಹನದಲ್ಲಿ ಪ್ರಯಾಣಿಸಿದ್ದಾರೆ, ಆದಿಶಂಕರರಂತೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್ ಗಾಂಧಿ ಮಾತ್ರ ಪಾದಯಾತ್ರೆ ನಡೆಸಿದ್ದಾರೆ ಎಂದು ಪಿ.ಜೆ. ಕುರಿಯನ್ ಹೇಳಿದರು.
ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರು ನಿರೀಕ್ಷಿಸದ ಸ್ವಾಗತವನ್ನು ಪಡೆದರು. ಕಾಶ್ಮೀರದವರೆಗೂ ಸಾವಿರಾರು ಜನ ರಾಹುಲ್‍ಗಾಗಿ ಕಾಯುತ್ತಿದ್ದರು ಎಂದವರು ಹೇಳಿದ್ದು, ಈಗಾಗಲೇ ಅವರ ವಾದದ ಬಗ್ಗೆ ಟ್ರೋಲ್ ಗಳು ಹುಟ್ಟಿಕೊಳ್ಳತೊಡಗಿದೆ.
ಆದಿಶಂಕರರ ನಂತರ ಭಾರತಯಾತ್ರೆ ರಾಹುಲ್ ಗಾಂಧಿಯಂತೆ ಕೈಗೊಂಡವರು ಬೇರೊಬ್ಬರಿರುವರೇ?: ರಾಹುಲ್ ಗಾಂಧಿ ಅವರ ಭಾರತ್ ಜೋಡೋಯಾತ್ರೆ ಕುರಿತು ಪಿ.ಜೆ. ಕುರಿಯನ್
0
ಏಪ್ರಿಲ್ 01, 2023
Tags