ಕಾಸರಗೋಡು: ಸ್ಥಳೀಯಾಡಳಿತ ಇಲಾಖೆ ನೇತೃತ್ವದಲ್ಲಿ ಜಿಲ್ಲೆಯಲ್ಲಿ ರಚಿಸಲಾಗಿರುವ ಮಾಲಿನ್ಯ ನಿಯಂತ್ರಣ ದಳ ವಿಶೇಷ ತಮಡ ತನ್ನ ಕಾರ್ಯಚಟುವಟಿಕೆಗಳನ್ನು ಚುರುಕುಗೊಳಿಸಿದ್ದು, ವಿವಿಧೆಡೆ ತಪಾಸಣೆ ನಡೆಸಿದೆ. ಮಂಜೇಶ್ವರ ಮತ್ತು ಉದುಮ ಗ್ರಾಮ ಪಂಚಾಯಿತಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಸಿದ ತಪಾಸಣೆಯಲ್ಲಿ ಸುಮಾರು 200 ಕೆ.ಜಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ತಂಡ ವಶಪಡಿಸಿಕೊಂಡಿದೆ. ಕೇವಲ ಪ್ಲಾಸ್ಟಿಕ್ ಉತ್ಪನ್ನಗಳನ್ನು ಮಾರಾಟ ಮಾಡುವ ಮಂಜೇಶ್ವರ ಗ್ರಾಮ ಪಂಚಾಯಿತಿಯ ಸಗಟು ಅಂಗಡಿಯಿಂದ 50 ಕೆ.ಜಿ. ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಿ ದಂಡ ವಸೂಲಿ ಮಾಡುವಂತೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗೆ ವರದಿ ರವಾನಿಸಲಾಗಿದೆ. ಉದುಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 12 ಅಂಗಡಿಗಳಲ್ಲಿ ಸ್ಕ್ವಾಡ್ ಪರಿಶೀಲನೆ ನಡೆಸಿತು. ಇತರ ವ್ಯಾಪಾರಿ ಸಂಸ್ಥೆಗಳು ನಿಷೇಧಿತ ಪ್ಲಾಸ್ಟಿಕ್ ಚೀಲಗಳಲ್ಲಿ ಸರಕುಗಳನ್ನು ಸಾಗಿಸುತ್ತಿರುವುದು ಕಂಡುಬಂದಿದೆ. ಎಲ್ಲಾ ಸಂಸ್ಥೆಗಳಿಂದ ಶಾಸನಬದ್ಧ ದಂಡವನ್ನು ವಿಧಿಸಲು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗೆ ವರದಿಯನ್ನು ರವಾನಿಸಲಾಗಿದೆ. ತಪಾಸಣೆಯಲ್ಲಿ ಸ್ಕ್ವಾಡ್ ಸದಸ್ಯರು, ಸಹಾಯಕ ಶುಚಿತ್ವ ಮಿಷನ್ ಸಂಯೋಜಕ ರಿಯಾಜ್, ಜಂಟಿ ನಿರ್ದೇಶಕ ಕಛೇರಿ ಜೂನಿಯರ್ ಸೂಪರಿಂಟೆಂಡೆಂಟ್ ಮನೋಜ್, ಪಿ.ವಿ.ಸಂತೋಷಕುಮಾರ್ ಮತ್ತು ಪೆÇಲೀಸ್ ಅಧಿಕಾರಿಗಳು,ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು. ಮುಂದಿನ ದಿನಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಿ ಜಿಲ್ಲೆಯಾದ್ಯಂತ ವ್ಯಾಪಿಸಲಾಗುವುದು ಹಾಗೂ ಪ್ಲಾಸ್ಟಿಕ್ ಹೊರತುಪಡಿಸಿ ಪರಿಸರ, ಸಾರ್ವಜನಿಕ, ಜಲ ಮತ್ತು ವಾಯು ಮಾಲಿನ್ಯ ಪತ್ತೆಯಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವ್ಯಾಪಾರಿ ಸಂಸ್ಥೆಗಳ ಮೇಲೆ ವ್ಯಾಪಕ ದಾಳಿ: ಮಾಲಿನ್ಯ ನಿಯಂತ್ರಣ ಕ್ರಮಗಳ ಜಾರಿಗೆ ಕ್ರಮ
0
ಏಪ್ರಿಲ್ 06, 2023