HEALTH TIPS

ಚೆನ್ನೈ ರೈಲು ನಿಲ್ದಾಣದ ಹಿಂದಿ ಫಲಕಕ್ಕೆ ಮಸಿ

 

              ಚೆನ್ನೈ: ದಕ್ಷಿಣ ಭಾರತದ ಹಾಲು ಮಾರಾಟ ಮಂಡಳಿಗಳಿಗೆ ತಮ್ಮ ಮೊಸರಿನ ಉತ್ಪನ್ನದ ಮೇಲೆ 'ದಹಿ' ಎಂಬ ಹಿಂದಿ ಪದವನ್ನು ಮುದ್ರಿಸಬೇಕು ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ನೀಡಿದ್ದ ಆದೇಶ ವಿವಾದವಾಗಿ ಕಡೆಗೆ ಎಫ್‌ಎಸ್‌ಎಸ್‌ಎಐ ಅದನ್ನು ಹಿಂಪಡೆದಿತ್ತು.

              ಇದೀಗ ಚೆನ್ನೈನ ಪೋರ್ಟ್ ರೈಲ್ವೆ ನಿಲ್ದಾಣದ ಹಿಂದಿ ಫಲಕಕ್ಕೆ ಅನಾಮಧೇಯ ವ್ಯಕ್ತಿಯೊಬ್ಬ ಮಸಿ ಬಳಿದಿರುವ ಘಟನೆ ನಡೆದಿದೆ. ಈ ಕುರಿತು ಎಎನ್‌ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.


                ಹಿಂದಿ ಫಲಕಕ್ಕೆ ಮಸಿ ಬಳಿದಿರುವ ಕುರಿತು ಅನಾಮಧೇಯ ವ್ಯಕ್ತಿಯ ಬಂಧನಕ್ಕೆ ಬಲೆ ಬೀಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಚೆನ್ನೈ ರೈಲ್ವೆ ಪೊಲೀಸರು ತಿಳಿಸಿದ್ದಾರೆ.

                   ಮಸಿ ಬಳಿದಿರುವ ಫಲಕವನ್ನು ರೈಲ್ವೆ ಪೊಲೀಸರು ಮೊದಲಿನಂತೆ ತಮಿಳು, ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಸ್ಷಷ್ಟವಾಗಿ ಕಾಣುವಂತೆ ಪುನರ್‌ಸ್ಥಾಪಿಸಿದ್ದಾರೆ.

                     ಮೊಸರಿನ ಪೊಟ್ಟಣಗಳ ಮೇಲೆ 'ದಹಿ' ಎಂದು ಕಡ್ಡಾಯವಾಗಿ ಹಿಂದಿ ಪದ ಉಲ್ಲೇಖಿಸಲೇಬೇಕೆಂಬ ತನ್ನ ಆದೇಶವನ್ನು ಎಫ್‌ಎಸ್‌ಎಸ್‌ಎಐ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಗುರುವಾರ ಪರಿಷ್ಕರಿಸಿತ್ತು. ಪ್ಯಾಕೆಟ್‌ಗಳ ಮುದ್ರಿತ ಲೇಬಲ್‌ಗಳಲ್ಲಿ ಇಂಗ್ಲಿಷ್‌ ಜತೆಗೆ, ಪ್ರಾದೇಶಿಕ ಭಾಷೆಯ ಹೆಸರು ಉಲ್ಲೇಖಿಸಬಹುದು ಎಂದು ಹೇಳಿತ್ತು.

Tamil Nadu | Unidentified persons yesterday blackened the Hindi portion of the signboard at Chennai Fort railway station. Railway Protection Force police have registered a case against unidentified persons. The signboard was restored to its original form.
Image
Image
1K
Reply
Copy link

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries