ಕಾಸರಗೋಡು: ವಿಷು-ರಂಜಾನ್ ಕಾಸರಗೋಡು ಜಿಲ್ಲಾ ಮೇಳ ಕಾಞಂಗಾಡಿನಲ್ಲಿ ಆರಂಭವಾಗಿದೆ. ಕುನುಮ್ಮಲ್ ಸಪ್ಲೈಕೋ ಪೀಪಲ್ಸ್ ಬಜಾರ್ ನಲ್ಲಿ ನಗರಸಭೆ ಅಧ್ಯಕ್ಷೆ ಕೆ.ವಿಸುಜಾತಾ ಉದ್ಘಾಟಿಸಿದರು. ಸಪ್ಲೈಕೋ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ವಿಷು ರಂಜಾನ್ ಮೇಳವು ಎಲ್ಲಾ ದಿನಬಳಕೆಯ ವಸ್ತುಗಳನ್ನು ಕಡಿಮೆ ಬೆಲೆಯಲ್ಲಿ ಒದಗಿಸುತ್ತದೆ. ಇಂತಹ ಮೇಳಗಳು ಹಬ್ಬದ ಸಮಯದಲ್ಲಿ ಜನರಿಗೆ ಸಬ್ಸಿಡಿ ದರದಲ್ಲಿ ಅಗತ್ಯ ವಸ್ತುಗಳನ್ನು ಮತ್ತು ಇತರ ದಿನಬಳಕೆಯ ವಸ್ತುಗಳನ್ನು ಕಡಿಮೆ ದರದಲ್ಲಿ ಖರೀದಿಸಲು ಅವಕಾಶವನ್ನು ಒದಗಿಸುತ್ತದೆ. ವಾರ್ಡ್ ಸದಸ್ಯೆ ಶೋಭನಾ ಮಾತನಾಡಿದರು. ಕಾಞಂಗಾಡ್ ಡಿಪೆÇೀ ಮ್ಯಾನೇಜರ್ ಟಿ.ಪಿ.ಸಜೀವನ್ ಸ್ವಾಗತಿಸಿ, ಸಪ್ಲೈಕೋ ಕುನ್ನುಮ್ಮಲ್ ಸೂಪರ್ ಮಾರ್ಕೆಟ್ ಮ್ಯಾನೇಜರ್ ಕೆ.ಮದನನ್ ವಂದಿಸಿದರು.
ವಿಷು-ರಂಜಾನ್ ಕಾಸರಗೋಡು ಜಿಲ್ಲಾ ಮೇಳ ಆರಂಭ
0
ಏಪ್ರಿಲ್ 12, 2023