ಕಾಸರಗೋಡು: ಜಿಲ್ಲಾದ್ಯಂತ ಈದುಲ್ ಫಿತೃ ಹಬ್ಬವನ್ನು ಮುಸ್ಲಿಮರು ಭಕ್ತಿಸಂಭ್ರಮದಿಂದ ಶನಿವಾರ ಆಚರಿಸಿದರು. ಮುಸ್ಲಿಮರು ಒಂದು ತಿಂಗಳ ಕಾಲ ಉಪವಾಸ ವ್ರತಾಚರಣೆ ಪೂರ್ತಿಗೊಳಿಸಿದ ನಂತರ ಈದುಲ್ ಫಿತೃ ಹಬ್ಬವನ್ನು ಆಚರಿಸುತ್ತಾರೆ.
ಮಕ್ಕಳು, ಹಿರಿಯರು ಹೊಸ ಬಟ್ಟೆಗಳನ್ನು ಧರಿಸಿ ಮಸೀದಿಗಳಿಗೆ ತೆರಳಿ ಈದ್ ಪ್ರಾರ್ಥನೆ ನಡೆಸಿದರು. ಬೆಳಗ್ಗೆ ಮಸೀದಿಗಳಿಗೆ ತೆರಳಿ ಪ್ರಾರ್ಥನೆಯಲ್ಲಿ ಪಾಲ್ಗೊಂಡ ನಂತರ ಪರಸ್ಪರ ಶುಭಾಶಯ ವಿನಿಮಯಮಾಡಿಕೊಂಡರು. ಕೆಲವೆಡೆ ಈದ್‍ಗಾಹ್‍ಗಳನ್ನೂ ಸಿದ್ಧಪಡಿಸಲಾಗಿತ್ತು. ಪ್ರಖ್ಯಾತ ವಿದ್ವಾಂಸರು, ಖತ್ವಾಗಳು ಮತ್ತು ಇಮಾಮ್‍ಗಳು ಹಬ್ಬದ ಪ್ರಾರ್ಥನೆ ಮತ್ತು ಖುತ್ಬಾ ನಡೆಸಿಕೊಟ್ಟರು.
ಮಸೀದಿ ಖತೀಬ್‍ಗಳು ತಮ್ಮ ಸಂದೇಶದಲ್ಲಿ ರಂಜಾನ್ ಸಮಯದಲ್ಲಿ ಗಳಿಸಿದ ಚೈತನ್ಯವನ್ನು ಕಾಪಾಡಿಕೊಲ್ಳುವುದರ ಜತೆಗೆ ಏಕತೆ ಮತ್ತು ಸಹೋದರತೆಯಿಂದ ಈದುಲ್ ಫಿತೃ ಆಚರಿಸಲು ಕರೆ ನೀಡಿದರು. ಹಬ್ಬದ ಸಂದರ್ಭದಲ್ಲಿ ಯಾರೂ ಹಸಿವಿನಿಂದ ಬಳಲಬಾರದು ಎಂಬ ಮಹತ್ವದ ಸಂದೇಶದೊಂದಿಗೆ ಕಡ್ಡಾಯ ದಾನವಾದ ಫಿತ್ವಾರ್ ಝಕಾತ್ ನೀಡುವ ಮೂಲಕ ಭಕ್ತರು ಹಬ್ಬದ ಆಚರಣೆಯಲ್ಲಿ ತೊಡಗಿಸಿಕೊಂಡರು.
ತಮ್ಮ ಸಂಬಂಧಿಕರು ಮತ್ತು ಸ್ನೇಹಿತರ ಮನೆಗಳಿಗೆ ಭೇಟಿ ನೀಡಿ, ತಮ್ಮ ಸಂಬಂಧ ಗಟ್ಟಿಗೊಳಿಸಲು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಕಾಸರಗೋಡು ಜಿಲ್ಲಾದ್ಯಂತ ಭಕ್ತಿ ಸಂಭ್ರಮದ ಈದುಲ್ ಫಿತೃ ಚರಣೆ
0
ಏಪ್ರಿಲ್ 22, 2023