ಕಾಸರಗೋಡು: ಜನರಲ್ ಆಸ್ಪತ್ರೆಯ ಶೋಚನೀಯಾವಸ್ಥೆ ಪರಿಹರಿಸುವಂತೆ ಆಗ್ರಹಿಸಿ ಬಿಜೆಪಿ ಮುಖಂಡರ ನಿಯೋಗ ಆಸ್ಪತ್ರೆ ಅಧಿಕಾರಿಗಳನ್ನು ಆಗ್ರಹಿಸಿದೆ.
ಲಿಫ್ಟ್ ಕಾರ್ಯವನ್ನು ತುರ್ತಾಗಿ ಸುಧಾರಿಸಿ ಆಸ್ಪತ್ರೆಯ ದುಃಸ್ಥಿತಿಗೆ ಪರಿಹಾರ ನೀಡುವಂತೆ ಆಸ್ಪತ್ರೆಯ ಉಪ ಅಧೀಕ್ಷಕ ಡಾ. ಜಮಾಲ್ ಅಹಮದ್ ಅವರಿಗೆ ಬಿಜೆಪಿ ಮುಖಂಡರು ಹಾಗೂ ಬಿಜೆಪಿ ನಗರಸಭಾ ಸದಸ್ಯರು ಮನವಿ ಸಲ್ಲಿಸಿದರು. ಬಿಜೆಪಿ ಮುಖಂಡರಾದ ಗುರುಪ್ರಸಾದ್ ಪ್ರಭು, ಸುಕುಮಾರ ಕುದ್ರೆಪ್ಪಾಡಿ, ಕೆ. ಸಿ. ಮನೋಹರನ್, ಗಣೇಶ್ ಅಡ್ಕತ್ತಬೈಲ್, ಕಾಸರಗೋಡು ನಗರಸಭಾ ಸದಸ್ಯೆ ಸವಿತಾ ಟೀಚರ್ ಸೇರಿದಂತೆ ಇತರ ಕೌನ್ಸಿಲರ್‍ಗಳು ಉಪಸ್ಥಿತರಿದ್ದರು.
ಜನರಲ್ ಆಸ್ಪತ್ರೆ ಶೋಚನೀಯಾವಸ್ಥೆ ಬಗೆಹರಿಸಲು ಬಿಜೆಪಿ ಮನವಿ
0
ಏಪ್ರಿಲ್ 12, 2023