ಮಂಜೇಶ್ವರ: ಉಪ್ಪಳ ಶಿವಶಕ್ತಿ ನಗರದ ಶ್ರೀ ಸದಾಶಿವ ದೇವಸ್ಥಾನದಲ್ಲಿ ಜರಗುವ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಎಪ್ರಿಲ್ 23ರಂದು ಅಪರಾಹ್ನ 2 ರಿಂದ ಹಾಗು ಕೂಡ್ಲು ಕಾವುಗೋಳಿ ಶ್ರೀ ಶಿವಕ್ಷೇತ್ರದ ನವೀಕರಣ ಅಷ್ಟಬಂಧ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಎಪ್ರಿಲ್ 27ರಂದು ಅಪರಾಹ್ನ 2 ರಿಂದ ಮೀಯಪದವಿನ ವಿದ್ಯಾವರ್ಧಕ ಮಕ್ಕಳ ಯಕ್ಷಗಾನ ಬಳಗದಿಂದ ‘ಹನುಮಾಗಮನ’ ಎಂಬ ಕಥಾಭಾಗದ ತಾಳಮದ್ದಳೆ ಜರಗಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ರವಿಶಂಕರ್ ಮಧೂರ್ ಚೆಂಡೆಯಲ್ಲಿ ಗೋಪಾಲಕೃಷ್ಣ ನಾವಡ ಮತ್ತು ಮೃದಂಗದಲ್ಲಿ ಮುರಳೀ ಮಾಧವ ಮಧೂರು ಭಾಗವಹಿಸಲ್ಲಿದ್ದಾರೆ ಎಮದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿದ್ಯಾವರ್ಧಕ ಮಕ್ಕಳ ಯಕ್ಷಗಾನ ಬಳಗದಿಂದ ತಾಳಮದ್ದಳೆ
0
ಏಪ್ರಿಲ್ 19, 2023