ನವದೆಹಲಿ: ಸಾಮಾಜಿಕ ಜಾಲತಾಣ ವಾಟ್ಸ್ಆಯಪ್ ಸರ್ವರ್ ಡೌನ್ ಆಗಿದ್ದು ಯಾವುದೇ ತರಹದ ವಿಡಿಯೋಗಳನ್ನು ಡೌಲೋಡ್ ಮಾಡಲು ಆಗುತ್ತಿಲ್ಲ ಎಂದು ನೆಟ್ಟಿಗರು ದೂಷಿಸಿದ್ಧಾರೆ.
ಭಾನುವಾರ ರಾತ್ರಿಯಿಂದ ಈ ಸಮಸ್ಯೆ ಎದುರಾಗಿದ್ದು ಸೋಮವಾರವೂ ಮುಂದುವರೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಭಾರತದಲ್ಲಿ ಶೇ.43ರಷ್ಟು ಮಂದಿ ಈ ಸಮಸ್ಯೆ ಎದುರಿಸಿದ್ದು ಶೇ.41ರಷ್ಟು ಮಂದಿ ಸರ್ವರ್ ಸಮಸ್ಯೆಯಿಂದಾಗಿ ಹೀಗಾಗಿರಬಹುದು ಎಂದು ಊಹಿಸಿದ್ದಾರೆ. ಇನ್ನು ಕೆಲವರು ಮೆಸೇಜ್ ಕಳಿಸುವಾಗ ಈಗಾಗುತ್ತದೆ ಎಂದು ಅಂದಾಜಿಸಿದ್ದಾರೆ.
ಈ ಕುರಿತು ಟ್ವಟಿರ್ನಲ್ಲಿ ಅಳಲು ತೋಡಿಕೊಂಡಿರುವ ನೆಟ್ಟಿಗರು ಕಳೆದ ರಾತ್ರಿಯಿಂದ ಈ ಸಮಸ್ಯೆ ಉದ್ಭವಿಸಿದ್ದು ಆಯಂಡ್ರಾಯ್ಡ್ ಪೋನುಗಳಲ್ಲಿ ಹೆಚ್ಚು ಎಂದು ಕಿಡಿಕಾರಿದ್ಧಾರೆ.
ಭಾರತದಲ್ಲಿ ಸರ್ವರ್ ಡೌನ್ ಆಗಿರುವ ಕುರಿತು ವಾಟ್ಸ್ಆಯಪ್ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ. ಪ್ರಸ್ತುತ ಕಂಪನಿಯೂ ಹೊಸ ವಿಡಿಯೋ ಸಂದೇಶ ಕಾರ್ಯದ ಪ್ರಗತಿಯನ್ನು ಪರಿಶೀಲಿಸುತ್ತಿದ್ದು ಇದು ಬೀಟಾ ಬಳಕೆದಾರರು ಸಮಸ್ಯೆಯನ್ನು ಎದರುಸಿರಬಹುದು ಎಂದು ಹೇಳಲಾಗಿದೆ.