ಕೊಚ್ಚಿ: ಪತ್ನಿಯೊಂದಿಗೆ ಮೊಬೈಲ್ನಲ್ಲಿ ಮಾತನಾಡುವಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದು ವ್ಯಕ್ತಿಯೊಬ್ಬ ದುರಂತ ಸಾವಿಗೀಡಾಗಿರುವ ಘಟನೆ ಕೇರಳದ ಪೆರುಂಬವೂರ್ನಲ್ಲಿ ನಡೆದಿದೆ.
ಮನೀಶ್ ಅಲಿಯಾಸ್ ಮನು (35) ಮೃತ ದುರ್ದೈವಿ. ಈತ ಪೆರುಂಬವೂರ್ನ ಇಮುರಿ ನಿವಾಸಿ.
ಈ ಘಟನೆ ಶುಕ್ರವಾರ ರಾತ್ರಿ 9 ಗಂಟೆಗೆ ನಡೆದಿದೆ.
ಪತಿಯಿಂದ ಬರದ ಪ್ರತಿಕ್ರಿಯೆ
ಮನೀಶ್ ಪತ್ನಿ ಒಂದು ವಾರಗಳ ಕಾಲ ತವರಿಗೆ ಹೋಗಿದ್ದಳು. ಹೀಗಾಗಿ ಪ್ರತಿ ದಿನ ಪತ್ನಿಗೆ
ಕರೆ ಮಾಡಿ ಮಾತನಾಡುತ್ತಿದ್ದ. ಅದೇ ರೀತಿ ಶುಕ್ರವಾರ ರಾತ್ರಿಯೂ ಕರೆ ಮಾಡಿದ್ದ. ಇಬ್ಬರು
ಮಾತನಾಡುತ್ತಿರುವಾಗ ಇದ್ದಕ್ಕಿದ್ದಂತೆಯೇ ಪತಿಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.
ಬಳಿಕ ಮನೀಶ್ ಪತ್ನಿ ನೆರೆಮನೆಯವರಿಗೆ ಮಾಹಿತಿ ಮುಟ್ಟಿಸಿದಳು.
ಸುದ್ದಿ ಕೇಳಿ ಪತ್ನಿಗೆ ಆಘಾತ
ಗಂಡನಿಗೆ ಅನೇಕ ಬಾರಿ ಕರೆ
ಮಾಡಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ
ನೆರೆಮನೆಯವರು ಮನೀಶ್ಗಾಗಿ ಹುಡುಕಾಡಿದ್ದಾರೆ. ಈ ವೇಳೆ ಆತ ಬಾವಿಯಲ್ಲಿ
ಪತ್ತೆಯಾಗಿದ್ದಾನೆ. ಮೇಲಕ್ಕೆ ಎತ್ತಿ ನೋಡಿದಾಗ ಆತ ಅಷ್ಟರಲ್ಲಾಗಲೇ ಮೃತಪಟ್ಟಿದ್ದ. ಈ
ಸುದ್ದಿ ಕೇಳಿ ಪತ್ನಿಗೆ ಆಘಾತವಾಗಿದ್ದು, ಆಕ್ರಂದನ ಮುಗಿಲು ಮುಟ್ಟಿತು.