HEALTH TIPS

ಫಲ ನೀಡದ 'ಮುದ್ರಾ' ಯೋಜನೆ: ಪಿ.ಚಿದಂಬರಂ ಟೀಕೆ

 

                   ನವದೆಹಲಿ: 'ಪ್ರಧಾನ ಮಂತ್ರಿ 'ಮುದ್ರಾ' ಯೋಜನೆಯಡಿ ಶೇ 83ರಷ್ಟು ಫಲಾನುಭವಿಗಳಿಗೆ ಗರಿಷ್ಠ ₹ 50 ಸಾವಿರ ಸಾಲ ನೀಡಿದ್ದು, ಈ ಮೊತ್ತದಲ್ಲಿ ಯಾವ ರೀತಿ ವಹಿವಾಟು ಮಾಡುವುದು ಸಾಧ್ಯ' ಎಂದು ಮಾಜಿ ಹಣಕಾಸು ಸಚಿವ, ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ಪ್ರಶ್ನಿಸಿದ್ದಾರೆ.

                      'ಮುದ್ರಾ' ಯೋಜನೆ ಜಾರಿಗೊಂಡು 8 ವರ್ಷಗಳಾದ ಹಿನ್ನೆಲೆಯಲ್ಲಿ ಈ ಬಗ್ಗೆ ಗಮನಸೆಳೆದಿರುವ ಅವರು, ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳು ಯೋಜನೆಯಡಿ ಒಟ್ಟು ₹ 23.3 ಲಕ್ಷ ಕೋಟಿ ಅನ್ನು 40.82 ಕೋಟಿ ಫಲಾನುಭವಿಗಳಿಗೆ ಹಂಚಿಕೆ ಮಾಡಿವೆ ಎಂದು ಮಾಹಿತಿ ನೀಡಿದರು.

                  ಈ ಕುರಿತ ಟ್ವೀಟ್‌ನಲ್ಲಿ ಅವರು, 'ಮಂಜೂರಾದ ಒಟ್ಟ ಸಾಲದ ಮೊತ್ತ ಗಮನಸೆಳೆಯಲಿದೆ. ಆದರೆ, ಶೇ 83 ಪ್ರಕರಣಗಳಲ್ಲಿ ಗರಿಷ್ಠ ಸಾಲ ₹ 50 ಸಾವಿರ ಎಂದು ತಿಳಿದಾಗ ಬೇಸರವಾಗಲಿದೆ' ಎಂದು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries