HEALTH TIPS

ಚೀನಿ ಭಾಷೆ ಕಲಿಯಲಿರುವ ಭಾರತೀಯ ಯೋಧರು

 

               ಗುವಾಹಟಿ: ಚೀನಾಕ್ಕೆ ಹೊಂದಿಕೊಂಡಿರುವ ಗಡಿಯಲ್ಲಿ ನಿಯೋಜನೆಗೊಂಡಿರುವ ಸೇನೆಯ ಅಧಿಕಾರಿಗಳು ಹಾಗೂ ಸೈನಿಕರು ಇನ್ನು ಮುಂದೆ ಚೀನಿ ಭಾಷೆಯನ್ನು ಕಲಿಯಲಿದ್ದಾರೆ.

                  ಚೀನಾ ಯೋಧರೊಂದಿಗೆ ಸಮರ್ಪಕ ಸಂವಹನ ಸಾಧ್ಯವಾಗಬೇಕು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸೇನೆ ಬುಧವಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

                    ಈ ಸಂಬಂಧ, ತೇಜ್‌ಪುರ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಸ್‌.ಎನ್‌.ಸಿಂಗ್‌ ಸಮ್ಮುಖದಲ್ಲಿ ತೇಜ್‌ಪುರದಲ್ಲಿರುವ ಸೇನೆಯ ತುಕಡಿಗಳ ಮುಖ್ಯಸ್ಥರು ಹಾಗೂ ವಿ.ವಿ. ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.

                 'ಚೀನಿ ಭಾಷೆ ಕಲಿಸುವ ಈ ಕೋರ್ಸ್‌ 16 ವಾರಗಳ ಅವಧಿಯದ್ದು. ಚೀನಾ ಯೋಧರೊಂದಿಗಿನ ಸಂವಹನ ಉತ್ತಮಗೊಳಿಸಲು ಹಾಗೂ ಕಮಾಂಡರ್‌ಗಳ ಮಟ್ಟದ ಸಭೆಗಳು, ಜಂಟಿ ತಾಲೀಮುಗಳು ನಡೆದ ಸಂದರ್ಭದಲ್ಲಿ ಇದು ನೆರವಾಗಲಿದೆ' ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries