ಕಾಸರಗೋಡು: ಸಂಚಾರ ನಿಯಮ ಉಲ್ಲಂಘನೆ ಪತ್ತೆ ಹಚ್ಚಲು ಸಾರಿಗೆ ಇಲಾಖೆ ಜಿಲ್ಲೆಯಲ್ಲಿ ಅಳವಡಿಸಿರುವ ಕೃತಕ ಬುದ್ಧಿಮತ್ತೆ (ಎಐ) ಕ್ಯಾಮೆರಾಗಳು ಏ. 20ರಿಂದ ಕಾರ್ಯಾಚರಿಸಲಿದ್ದು, ಸಂಚಾರಿ ಕಾನೂನು ಉಲ್ಲಂಘಿಸುವವರಿಗೆ ಉರುಳಾಗಲಿದೆ. ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಪ್ರಮುಖವಾಗಿ ಸೀಟ್‍ಬೆಲ್ಟ್ ಅಳವಡಿಸದಿರುವುದ, ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾವಣೆ, ಮೊಬೈಲ್ ಸಂಭಾಷಣೆಯೊಂದಿಗೆ ವಾಹನ ಚಲಾವಣೆ, ಮೂರು ಮಂದಿಯನ್ನು ಹೇರಿಕೊಂಡು ದ್ವಿಚಕ್ರ ವಾಹನ ಸವಾರಿ ನಡೆಸುವವರನ್ನು ಸಿಸಿ ಕ್ಯಾಮರಾ ಖೆಡ್ಡಾಗೆ ಬೀಳಿಸಲಿದೆ. ದಿನದಲ್ಲಿ ಒಂದಕ್ಕಿಂತ ಹೆಚ್ಚುಬಾರಿ ರಸ್ತೆಸಂಚಾರ ಕಾನೂನು ಉಲ್ಲಂಘಿಸಿದರೂ ಅಷ್ಟುಬಾರಿ ದಂಡ ಪಾವತಿಸಬೇಕಾಗಿಬರಲಿದೆ. ರಸ್ತೆಸಂಚಾರಿ ಕಾನೂನು ಪದೇ ಪದೆ ಉಲ್ಲಂಘಿಸಿದಲ್ಲಿ ದಂಡದ ಪ್ರಮಾಣದಲ್ಲೂ ಹೆಚ್ಚಳವುಂಟಾಗಲಿದೆ.
ರಾತ್ರಿ ವೇಳೆಯಲ್ಲೂ ರಸ್ತೆಸಂಚಾರಿ ಕಾನೂನು ಉಲ್ಲಂಘನೆಯ ಸ್ಪಷ್ಟ ಚಿತ್ರ ಗೋಚರಿಸುವ ರೀತಿಯ ಸಿಸಿ ಕ್ಯಾಮರಾಗಳು ಅವಳಡಿಕೆಯಾಗಲಿದೆ. ಸೂಚನೆಗಳ ಉಲ್ಲಂಘನೆಯ ದಿನಾಂಕ, ಸಮಯ, ಸ್ಥಳ ಮತ್ತು ದಂಡದ ಮೊತ್ತ ಆಯಾ ವಾಹನ ಮಾಲಿಕರ ಮೊಬೈಲ್‍ಗೆ ರವಾಬೆಯಘಲಿದೆ. ಅಕ್ರಮ ನಿಲುಗಡೆಗೆ ಕನಿಷ್ಠ ದಂಡ 250 ರೂ, ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಇಲ್ಲದೆ ವಾಹನ ಚಲಾಯಿಸಿದರೆ 500 ರೂ, ಅತಿವೇಗಕ್ಕೆ 1500 ರೂ. ಮತ್ತು ಚಾಲನೆ ಮಾಡುವಾಗ ಮೊಬೈಲ್ ಫೆÇೀನ್ ಬಳಸಿದರೆ 2000 ರೂ. ದಂಡ ಪಾವತಿಸಬೇಕಾಗುತ್ತದೆ.
ರಸ್ತೆಸಂಚಾರಿ ಕಾನೂನು ಪಾಲಿಸದಿದ್ದಲ್ಲಿ ಬೀಳಲಿದೆ ಭಾರಿ ದಂಡ: ಇಂದಿನಿಂದಲೇ ಜಾರಿಗೆ
0
ಏಪ್ರಿಲ್ 19, 2023