HEALTH TIPS

ಅದಾನಿ ಗ್ರೂಪ್ ಬ್ರಾಂಡ್ ಕಸ್ಟೋಡಿಯನ್ ಅಮನ್ ಕುಮಾರ್ ಸಿಂಗ್ ಎನ್‌ಡಿಟಿವಿ ಮಂಡಳಿಗೆ ರಾಜೀನಾಮೆ

 

             ನವದೆಹಲಿ: ಛತ್ತೀಸ್‌ಗಢದಲ್ಲಿ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಅದಾನಿ ಸಮೂಹದ ಕಾರ್ಪೊರೇಟ್ ಬ್ರಾಂಡ್ ಕಸ್ಟೋಡಿಯನ್ ಮತ್ತು ಕಾರ್ಪೊರೇಟ್ ವ್ಯವಹಾರಗಳ ಮುಖ್ಯಸ್ಥ ಅಮನ್ ಕುಮಾರ್ ಸಿಂಗ್ ಅವರು ಇತರ ಕಾರಣಗಳಿಂದಾಗಿ ಎನ್‌ಡಿಟಿವಿ ಆಡಳಿತ ಮಂಡಳಿಗೆ ರಾಜೀನಾಮೆ ನೀಡಿದ್ದಾರೆ.

                 "ಅಮನ್ ಕುಮಾರ್ ಸಿಂಗ್ ಅವರು ಕಂಪನಿಯ ಕಾರ್ಯನಿರ್ವಾಹಕ ಅಲ್ಲದ ನಿರ್ದೇಶಕರ ಸ್ಥಾನಕ್ಕೆ ಏಪ್ರಿಲ್ 1, 2023 ರಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡಿದ್ದಾರೆ ಎಂದು ಸ್ಟಾಕ್ ಎಕ್ಸ್‌ಚೇಂಜ್ ಗೆ ನವದೆಹಲಿ ಟೆಲಿವಿಷನ್ ಲಿಮಿಟೆಡ್(ಎನ್ ಡಿಟಿವಿ) ತಿಳಿಸಿದೆ.

                   ಮಾಜಿ ಭಾರತೀಯ ಕಂದಾಯ ಸೇವೆ ಅಧಿಕಾರಿಯಾಗಿರುವ ಸಿಂಗ್ ಅವರು, ಛತ್ತೀಸ್‌ಗಢದ ರಮಣ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಪ್ರಬಲ ಅಧಿಕಾರಿಯಾಗಿದ್ದರು ಮತ್ತು ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

                      ಸರ್ಕಾರಿ ಸೇವೆಗೆ ರಾಜೀನಾಮೆ ನೀಡಿದ್ದ ಸಿಂಗ್ ನವೆಂಬರ್ 2022 ರಲ್ಲಿ ಅದಾನಿ ಗ್ರೂಪ್ ನ ಕಾರ್ಪೊರೇಟ್ ಬ್ರಾಂಡ್ ಕಸ್ಟೋಡಿಯನ್ ಮತ್ತು ಕಾರ್ಪೊರೇಟ್ ವ್ಯವಹಾರಗಳ ಮುಖ್ಯಸ್ಥರಾಗಿ ಸೇರಿದ್ದರು.

                    ಫೆಬ್ರವರಿ 2020ರಲ್ಲಿ, ಛತ್ತೀಸ್‌ಗಢದ ಆರ್ಥಿಕ ಅಪರಾಧಗಳ ವಿಭಾಗ(EOW), ಸಿಂಗ್ ಮತ್ತು ಅವರ ಪತ್ನಿ ಯಾಸ್ಮೀನ್ ಸಿಂಗ್ ವಿರುದ್ಧ ಅಕ್ರಮ ಆಸ್ತಿ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿತ್ತು.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries