ಕಾಸರಗೋಡು: ಬೇಕಲ ಉಪವಿಭಾಗದ ಪೆÇಲೀಸ್ ಕಂಟ್ರೋಲ್ ರೂಮ್‍ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಡಿಯೋ ಕಾನ್ಫರೆನ್ಸ್ ಮೂಲಕ ಸೋಮವಾರ ಶಿಲಾನ್ಯಾಸ ನೆರವೇರಿಸಿದರು. ಶಾಸಕ ಸಿ.ಎಚ್.ಕುಞಂಬು ಅಧ್ಯಕ್ಷತೆ ವಹಿಸಿದ್ದರು. ಬೇಕಲ ಉಪವಿಭಾಗದ ಪೆÇಲೀಸ್ ಕಂಟ್ರೋಲ್ ರೂಮ್ ಅತ್ಯಂತ ಮಾದರಿ ಹಾಗೂ ಆಧುನಿಕ ವ್ಯವಸ್ಥೆಯಾಗಿ ಸಿದ್ಧಗೊಳ್ಳುತ್ತಿದೆ ಎಂದು ಶಾಸಕ ಸಿ.ಎಚ್.ಕುಞಂಬು ತಿಳಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಸ್ ಪಾದೂರ್, ಕಾಞಂಗಾಡ್ ಬ್ಲಾಕ್ ಪಂಚಾಯಿತಿ ಸದಸ್ಯೆ ವಿ. ಗೀತಾ, ಪಳಿಕ್ಕರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾಸಿನ್ ವಹಾಬ್, ಕೆಪಿಒಎ ಕಾಸರಗೋಡು ಅಧ್ಯಕ್ಷ ವಿ.ಉನ್ನಿಕೃಷ್ಣನ್, ಕೆಪಿಎ ಕಾಸರಗೋಡು ಅಧ್ಯಕ್ಷ ಬಿ. ರಾಜ್‍ಕುಮಾರ್, £ಮೇಲ್ಪರಂಬ ಠಾಣೆ ಇನ್ಸ್‍ಪೆಕ್ಟರ್ ಉತ್ತಮ್‍ದಾಸ್ ಉಪಸ್ಥಿತರಿದ್ದರು. ಬೇಕಲ ವಿಭಾಗದ ಡಿವೈಎಸ್ಪಿ ಸಿ.ಕೆ.ಸುನೀಲ್ ಕುಮಾರ್ ಸ್ವಾಗತಿಸಿದರು. ಬೇಕಲ ಪೆÇಲೀಸ್ ಠಾಣೆ ಇನ್ಸ್‍ಪೆಕ್ಟರ್ ಪಿ.ವಿಪಿನ್ ವಂದಿಸಿದರು.
ಹೆಚ್ಚಿನ ಪೆÇಲೀಸ್ ಸಿಬ್ಬಂದಿ ಮತ್ತು ವಾಹನಗಳನ್ನು ನಿಯೋಜಿಸುವುದರಿಂದ, ತುರ್ತು ಸಂದರ್ಭದಲ್ಲಿ ಪೆÇಲೀಸರು ತಕ್ಷಣ ಘಟನಾ ಸ್ಥಳಕ್ಕೆ ತಲುಪಬಹುದಾಗಿದ್ದು, ಸಿಸಿಟಿವಿ ಸೇರಿದಂತೆ ತಾಂತ್ರಿಕ ವ್ಯವಸ್ಥೆ 24 ಗಂಟೆಯೂ ಕಾರ್ಯನಿರ್ವಹಿಸಲಿದೆ.
ಬೇಕಲ ಉಪವಿಭಾಗದ ಪೆÇಲೀಸ್ ಕಂಟ್ರೋಲ್ ರೂಂಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶಿಲಾನ್ಯಾಸ
0
ಏಪ್ರಿಲ್ 06, 2023