ಕಾಸರಗೋಡು: ಪಾವೂರು ಪೆÇಯ್ಯೇ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿಯ 54ನೇ ವಾರ್ಷಿಕ ಏಕಾಹ ಭಜನೋತ್ಸವ ಶುಕ್ರವಾರ ಜರುಗಿತು. ಕೊಪ್ಪಳ ಕೋಟಿಯಪ್ಪ ಪೂಜಾರಿ ದಂಪತಿ ದೀಪ ಬೆಳಗಿಸುವ ಮೂಲಕ ಭಜನಾ ಸಂಕೀರ್ತನೆಗೆ ಚಾಲನೆ ನೀಡಿದರು.
ಈ ಸಂದರ್ಭ ಶ್ರೀ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಶಿವರಾಮಶೆಟ್ಟಿ ಮುಗೇರು ಗುತ್ತು,ಕ್ಷೇತ್ರದ ಅರ್ಚಕ, ಬಂಟ ದೈವದ ದರ್ಶನ ಪಾತ್ರಿ ಚನ್ನಪ್ಪ ಕಲ್ಲಾಜೆ, ಭಜನ ಮಂಡಳಿಯ ಅಧ್ಯಕ್ಷ ಸಜಿತ್ ಕಲ್ಲಾಜೆ ,ಭಜನಾ ಮಂಡಳಿಯ ಪ್ರಧಾನ ಕಾರ್ಯದರ್ಶಿ ಹರ್ಷಿತ್ ನೆಕ್ಕಲ ,ಕ್ಷೇತ್ರ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ರವಿ ಮುಡಿಮಾರು, ಬೋಜಮಾಸ್ಟರ್ ಬಳ್ಳೂರು ,ತ್ಯಾಂಪಣ್ಣ ರೈ ಪಾವೂರು, ಭಜನಾ ಮಂಡಳಿಯ ಮಾಜಿ ಅಧ್ಯಕ್ಷ ವಿಶ್ವನಾಥ್ ಕಲ್ಲಾಜೆ, ಆನಂದ ತಚ್ಚಿರೆ, ಡಾ. ಗಣೇಶ್ ಪಾವೂರು, ಗಣೇಶ್ ಟೈಲರ್ ಪಾವೂರು ,ನಾಗೇಶ್ ಬಲ್ಲೂರು ಉಪಸ್ಥಿತರಿದ್ದರು.
ಪಾವೂರು ಪೆÇಯ್ಯೆ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಏಕಾಹ ಭಜನೋತ್ಸವ
0
ಏಪ್ರಿಲ್ 15, 2023