ಕಾಸರಗೋಡು: ಕೇರಳ ಪೆÇಲೀಸ್ ಅಧಿಕಾರಿಗಳ ಸಂಘದ 33ನೇ ವರ್ಷದ ಕಾಸರಗೋಡು ಜಿಲ್ಲಾ ಸಮ್ಮೇಳನದ ಅಂಗವಾಗಿ ನಿವೃತ್ತರಾದ ಪೆÇಲೀಸ್ ಅಧಿಕಾರಿಗಳ ಸಂಗಮ, ಸನ್ಮಾನ ಸಮಾರಂಭ ಕಾಸರಗೋಡು ಕೋಟಕಣಿ ಜೀವಾಸ್ ಸಭಾಂಗಣದಲ್ಲಿ ಜರುಗಿತು. ಜಿಲ್ಲಾ ಪೆÇಲಿಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೇನಾ ಸಮಾರಂಭ ಉದ್ಘಾಟಿಸಿದರು.
ಸ್ವಾಗತ ಸಂಘದ ಅಧ್ಯಕ್ಷ ಪಿ.ಅಜಿತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಅಂಬಿಕಾಸುತನ್ ಮಾಙËಡ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಡಿವೈಎಸ್ಪಿ ಪಿ.ಕೆ.ಸುಧಾಕರನ್, ನಿವೃತ್ತ ಡಿವೈಎಸ್ಪಿಅಬ್ದುಲ್ ಗಫೂರ್, ಬಾಲಕೃಷ್ಣನ್, ಕೆಪಿಒಎ ಜಿಲ್ಲಾಧ್ಯಕ್ಷ ವಿ. ಉಣ್ಣಿಕೃಷ್ಣನ್, ಸಂಘಟನೆ ರಾಜ್ಯ ಸಮಿತಿ ಉಪಾಧ್ಯಕ್ಷ ಪಿ.ಪಿ. ಮಹೇಶ್, ಕೆಪಿಎ ರಾಜ್ಯ ಜಂಟಿ ಕಾರ್ಯದರ್ಶಿ ಇ.ವಿ. ಪ್ರದೀಪನ್, ಕೆಪಿಪಿ ಡಬ್ಲ್ಯೂ.ಎ. ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಲರ ಬಾಲಕೃಷ್ಣನ್, ರಾಜ್ಯ ಉಪಾಧ್ಯಕ್ಷ ಟಿ.ವಿ.ರತ್ನಾಕರನ್, ಜಿಲ್ಲಾ ಪೆÇಲೀಸ್ ಸಹಕಾರಿ ಸಂಗಮದ ಅಧ್ಯಕ್ಷ ಸುರೇಶ್ ಮುರಿಕೋಳಿ, ಕೆಪಿಎ ಜಿಲ್ಲಾ ಕಾರ್ಯದರ್ಶಿ ಎ.ಪಿ.ಸುರೇಶ್, ಕೆ.ಎಂ.ವಿಜಯನ್, ಪಿ.ವಿ.ಸತೀಸನ್ ಉಪಸ್ಥಿತರಿದ್ದರು. ಕೆಪಿಓಎ ಜಿಲ್ಲಾ ಸಮಿತಿ ಕಾರ್ಯದರ್ಶಿ ಎಂ. ಸದಾಶಿವನ್ ಸ್ವಾಗತಿಸಿದರು.
ಕೇರಳ ಪೆÇಲೀಸ್ ಅಧಿಕಾರಿಗಳ ಸಂಘದ ಜಿಲ್ಲಾ ಸಮ್ಮೇಳನ, ಸನ್ಮಾನ ಸಮಾರಂಭ
0
ಏಪ್ರಿಲ್ 06, 2023