ವಾಷಿಂಗ್ಟನ್: ಅಮೆರಿಕದ ಜಾರ್ಜಿಯಾ ಅಸೆಂಬ್ಲಿಯಲ್ಲಿ ಹಿಂದೂಫೋಬಿಯಾವನ್ನು ಖಂಡಿಸುವ ನಿರ್ಣಯವನ್ನು ಅಂಗೀಕರಿಸಿದ್ದು, ಇಂತಹ ಶಾಸನಾತ್ಮಕ ಕ್ರಮವನ್ನು ಕೈಗೊಂಡ ಮೊದಲ ಅಮೆರಿಕನ್ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಅಮೆರಿಕದ ಜಾರ್ಜಿಯಾ ಅಸೆಂಬ್ಲಿಯಲ್ಲಿ ಹಿಂದೂಫೋಬಿಯಾವನ್ನು ಖಂಡಿಸುವ ನಿರ್ಣಯವನ್ನು ಅಂಗೀಕರಿಸಿದ್ದು, ಇಂತಹ ಶಾಸನಾತ್ಮಕ ಕ್ರಮವನ್ನು ಕೈಗೊಂಡ ಮೊದಲ ಅಮೆರಿಕನ್ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಿಂದೂಫೋಬಿಯಾ ಮತ್ತು ಹಿಂದೂ ವಿರೋಧಿ ಧರ್ಮಾಂಧತೆಯನ್ನು ಖಂಡಿಸಿರುವ ನಿರ್ಣಯವು, ಹಿಂದೂ ಧರ್ಮವು ವಿಶ್ವದ ಅತಿದೊಡ್ಡ ಮತ್ತು ಪುರಾತನ ಧರ್ಮಗಳಲ್ಲಿ ಒಂದಾಗಿದೆ ಎಂದು ಹೇಳಿದೆ.
ಹಿಂದೂ ಧರ್ಮದ ಮೇಲಿನ ದಾಳಿಗಳನ್ನು ಗುರಿಯಾಗಿಟ್ಟುಕೊಂಡು ನಡೆಯುವ ದಾಳಿ ಮತ್ತು ಹಿಂದೂ
ವಿರೋಧಿ ಧರ್ಮಾಂಧತೆ ಮತ್ತು ಅಸಹಿಷ್ಣುತೆ, “ಹಿಂದೂಫೋಬಿಯಾವನ್ನು ಜಾರ್ಜಿಯಾದ ಶಾಸಕಾಂಗ
ಖಂಡಿಸಿದೆ. ಸ್ಟೇಟ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸರ್ವಾನುಮತದಿಂದ ಅಂಗೀಕರಿಸಿದ
ನಿರ್ಣಯದ ಪ್ರಕಾರ ಶೈಕ್ಷಣಿಕ ವಲಯದಲ್ಲಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು “ಹಿಂದೂ ಧರ್ಮದ
ಪವಿತ್ರ ಗ್ರಂಥಗಳು ಮತ್ತು ಸಾಂಸ್ಕೃತಿಕ ಆಚರಣೆಗಳನ್ನು ನಿಂದಿಸುವ ಕಾರ್ಯ
ಮಾಡುತ್ತಿದ್ದಾರೆ. ಅಲ್ಲದೇ ಹಿಂದೂಫೋಬಿಯಾವನ್ನು ಹುಟ್ಟುಹಾಕಲು ಯತ್ನಿಸುತ್ತಿದ್ದಾರೆ
ಎಂದು ತಿಳಿಸಲಾಗಿದೆ.
ಸ್ವೀಕಾರ, ಪರಸ್ಪರ ಗೌರವ ಮತ್ತು ಶಾಂತಿಯ ಮೌಲ್ಯಗಳು, ವೈವಿಧ್ಯಮಯ ಸಂಪ್ರದಾಯಗಳು ಮತ್ತು ನಂಬಿಕೆ ಹಿಂದೂ ಧರ್ಮದ ಮೂಲ ಸಾರವಾಗಿದ್ದು, ಜಾಗತಿಕ ಶಾಂತಿಯನ್ನು ಬಯಸುವ ಅತ್ಯಂತ ಪವಿತ್ರ ಧರ್ಮ ಎಂದು ಜಾರ್ಜಿಯಾ ಅಸೆಂಬ್ಲಿಯ ನಿರ್ಣಯದಲ್ಲಿ ಪ್ರಶಂಸೆ ವ್ಯಕ್ತಪಡಿಸಲಾಗಿದೆ. ಜಾರ್ಜಿಯಾದಲ್ಲಿನ ಅತಿದೊಡ್ಡ ಹಿಂದೂ ಮತ್ತು ಭಾರತೀಯ-ಅಮೆರಿಕನ್ ಸಮುದಾಯಗಳಲ್ಲಿ ಒಂದಾದ, ಅಟ್ಲಾಂಟಾದ ಉಪನಗರದಲ್ಲಿರುವ ಫೋರ್ಸಿತ್ ಕೌಂಟಿಯ ಪ್ರತಿನಿಧಿಗಳಾದ ಲಾರೆನ್ ಮೆಕ್‌ಡೊನಾಲ್ಡ್ ಮತ್ತು ಟಾಡ್ ಜೋನ್ಸ್ ಈ ನಿರ್ಣಯವನ್ನು ಜಾರ್ಜಿಯಾ ಅಸೆಂಬ್ಲಿಯಲ್ಲಿ ಮಂಡಿಸಿದ್ದಾರೆ.
ವೈದ್ಯಕೀಯ, ವಿಜ್ಞಾನ ಮತ್ತು ಇಂಜಿನಿಯರಿಂಗ್, ಮಾಹಿತಿ ತಂತ್ರಜ್ಞಾನ, ಆತಿಥ್ಯ, ಹಣಕಾಸು, ಶಿಕ್ಷಣ, ಇಂಧನ, ಚಿಲ್ಲರೆ ವ್ಯಾಪಾರ ಮತ್ತು ಉತ್ಪಾದನಾ ಕ್ಷೇತ್ರಗಳಲ್ಲಿ, ಅಮೆರಿಕನ್-ಹಿಂದೂ ಸಮುದಾಯವು ಪ್ರಮುಖ ಕೊಡುಗೆ ನೀಡಿದೆ ಎಂದು ನಿರ್ಣಯವು ಗಮನಿಸಿದೆ. ಅಷ್ಟೇ ಅಲ್ಲದೇ ಹಿಂದೂ ಸಮುದಾಯವು ಯೋಗ, ಆಯುರ್ವೇದ, ಧ್ಯಾನ, ಆಹಾರ, ಸಂಗೀತ, ಕಲೆ ಹೀಗೆ ಮುಂತಾದ ಕ್ಷೇತ್ರಗಳಲ್ಲೂ ಸಾಕಷ್ಟು ಕೊಡುಗೆ ನೀಡಿದ್ದು, ಅಮೆರಿಕದ ಸಾಂಸ್ಕೃತಿಕ ವಲಯವನ್ನು ಅತ್ಯಂತ ಶ್ರೀಮಂತಗೊಳಿಸಿದೆ ಎಂದು ನಿರ್ಣಯದಲ್ಲಿ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ.
ಫಾರ್ಸಿತ್ ಕೌಂಟಿ ರಾಜ್ಯವು “ಹಿಂದೂ ಅಮೆರಿಕನ್ನರು ಮತ್ತು ಕಷ್ಟಪಟ್ಟು ದುಡಿಯುವ, ನಮ್ಮ ಕಾನೂನುಗಳನ್ನು ಅನುಸರಿಸುವ, ಕೌಟುಂಬಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಮತ್ತು ನಮ್ಮ ಆರ್ಥಿಕ ಮತ್ತು ಸಾಮಾಜಿಕ ಯೋಗಕ್ಷೇಮಕ್ಕೆ ಕೊಡುಗೆ ನೀಡುವವರು ಎಂದು ಘೋಷಿಸಿದೆ. 2021 ರಲ್ಲಿ 40 ಕ್ಕೂ ಹೆಚ್ಚು ವಿಶ್ವವಿದ್ಯಾನಿಲಯಗಳು “ಜಾಗತಿಕ ಹಿಂದುತ್ವವನ್ನು ಕಿತ್ತುಹಾಕುವುದು” ಎಂಬ ಸಮ್ಮೇಳನವನ್ನು ಪ್ರಾಯೋಜಿಸಿದವು, ಇದನ್ನು ಅನೇಕ ಹಿಂದೂ ಸಂಘಟನೆಗಳು ಖಂಡಿಸಿದ್ದವು.
ಹಿಂದೂಗಳ ವಿರುದ್ಧ ದ್ವೇಷದ ಅಪರಾಧ ಪ್ರಕರಣಗಳು
ಕಳೆದ ಕೆಲವು ದಶಕಗಳಲ್ಲಿ ದೇಶದ ಹಲವು ಭಾಗಗಳಲ್ಲಿ ಹಿಂದೂ-ಅಮೆರಿಕನ್ನರ ವಿರುದ್ಧ ದ್ವೇಷದ
ಅಪರಾಧಗಳ ದಾಖಲೀಕರಣದ ನಿದರ್ಶನಗಳಿವೆ. ಹಿಂದೂ ಧರ್ಮದ ವಿಘಟನೆಯನ್ನು ಬೆಂಬಲಿಸುವ ಮತ್ತು
ಅದರ ಪವಿತ್ರ ಗ್ರಂಥಗಳನ್ನು ದೂಷಿಸುವ ಕೆಲವು ಶೈಕ್ಷಣಿಕ ಸಂಸ್ಥೆಗಳಿಂದ, ಹಿಂದೂಫೋಬಿಯಾ
ಉಲ್ಬಣಗೊಂಡಿದೆ ಮತ್ತು ಸಾಂಸ್ಥಿಕವಾಗಿದೆ ಎಂದು ನಿರ್ಣಯದಲ್ಲಿ ಖಂಡಿಸಲಾಗಿದೆ. ಹಿಂಸೆ
ಮತ್ತು ದಬ್ಬಾಳಿಕೆಯ ಸಾಂಸ್ಕೃತಿಕ ಆಚರಣೆಗಳನ್ನು ಅಮೆರಿಕದ ಸಮಾಜವು ಎಂದಿಗೂ
ಒಪ್ಪಿಕೊಳ್ಳುವುದಿಲ್ಲ ಎಂದು ನಿರ್ಣಯದಲ್ಲಿ ಸ್ಪಷ್ಟಪಡಿಸಲಾಗಿದೆ.
ಕಳೆದ ಮಾರ್ಚ್ 22ರಂದು ಜಾರ್ಜಿಯಾ ಸ್ಟೇಟ್ ಕ್ಯಾಪಿಟಲ್‌ನಲ್ಲಿ ಮೊಟ್ಟಮೊದಲ ಹಿಂದೂ ವಕೀಲರ ದಿನವನ್ನು, ಉತ್ತರ ಅಮೆರಿಕದ ಹಿಂದೂಗಳ ಒಕ್ಕೂಟ(CoHNA) ಆಯೋಜಿಸಿತ್ತು. ಇದರಲ್ಲಿ ಜಾರ್ಜಿಯಾ ಅಸೆಂಬ್ಲಿಯ ರಿಪಬ್ಲಿಕನ್ ಮತ್ತು ಡೆಮಾಕ್ರೆಟಿಕ್ ಪಕ್ಷದ ಸುಮಾರು 25 ಸದಸ್ಯರು ಭಾಗವಹಿಸಿದ್ದರು. ತಾರತಮ್ಯದಿಂದ ಹಿಂದೂ ಸಮುದಾಯವನ್ನು ರಕ್ಷಿಸಲು ಮತ್ತು ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳಲ್ಲಿ ಹಿಂದೂ ಧ್ವನಿಗೆ ಮಹತ್ವ ನೀಡಲು, ಈ ವೇಳೆ ಈ ಸದಸ್ಯರು ಪ್ರತಿಜ್ಞೆ ಮಾಡಿದರು ಎಂದು ಮೂಲಗಳು ತಿಳಿಸಿವೆ.
"ಈ ಕೌಂಟಿ ನಿರ್ಣಯವನ್ನು ಅಂಗೀಕರಿಸುವ ಸಂಪೂರ್ಣ ಪ್ರಕ್ರಿಯೆಯ ಮೂಲಕ, ನಮಗೆ ಮಾರ್ಗದರ್ಶನ ನೀಡಿದ ರೆಪ್ ಮೆಕ್‌ಡೊನಾಲ್ಡ್ ಮತ್ತು ರೆಪ್ ಜೋನ್ಸ್ ಮತ್ತು ಇತರ ಅಸೆಂಬ್ಲಿ ಸದಸ್ಯರೊಂದಿಗೆ ಕೆಲಸ ಮಾಡುವುದು ನಿಜವಾದ ಗೌರವದ ಸಂಗತಿಯಾಗಿದೆ.." ಎಂದು CoHNA ಉಪಾಧ್ಯಕ್ಷ ರಾಜೀವ್ ಮೆನನ್ ಹೇಳಿಕೆ ನೀಡಿದ್ದಾರೆ.
CoHNA ಪ್ರಧಾನ ಕಾರ್ಯದರ್ಶಿ ಶೋಭಾ ಸ್ವಾಮಿ ಮಾತನಾಡಿ, "ಜಾರ್ಜಿಯಾ ಅಸೆಂಬ್ಲಿಯ ಈ ನಿರ್ಣಯ ಅಮೆರಿಕನ್-ಹಿಂದೂ ಸಮಾಜದ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿದೆ. ಮತಾಂಧತೆಯ ವಿರುದ್ಧದ ಹೋರಾಟಕ್ಕೆ ಈ ನಿರ್ಣಯ ಮತ್ತಷ್ಟು ಬಲ ನೀಡಿದೆ. ಅಮೆರಿಕನ್-ಹಿಂದೂ ಸಮುದಾಯವು ದೇಶದ ಏಳಿಗೆಯಲ್ಲಿ ತನ್ನ ಕೊಡುಗೆಯನ್ನು ಮತ್ತಷ್ಟು ಹೆಚ್ಚಿಸಲು, ಈ ನಿರ್ಣಯ ನೆರವಾಗಿದೆ.." ಎಂದು ಹೇಳಿದ್ದಾರೆ.