HEALTH TIPS

Indian Railways: 170 ವರ್ಷ ಪೂರೈಸಿದ ಭಾರತೀಯ ರೈಲ್ವೇ! ಮೊದಲ ಪ್ರಯಾಣಿಕ ರೈಲು ಮಾರ್ಗ ಯಾವುದು?

 ವಿಶ್ವದ ಅತಿದೊಡ್ಡ ರೈಲ್ವೆ ನೆಟ್​ವರ್ಕ್​ಗಳಲ್ಲೇ ಭಾರತೀಯ ರೈಲ್ವೇ ಮುಂಚೂಣಿಯಲ್ಲಿದೆ. ಸರಕುಗಳನ್ನು ಸಾಗಿಸುವುದರ ಜೊತೆಗೆ ಜನರನ್ನು ಸುರಕ್ಷಿತವಾಗಿ ಅವರ ಗಮ್ಯಸ್ಥಾನಗಳಿಗೆ ಸಾಗಿಸುವಲ್ಲಿ ಭಾರತೀಯ ರೈಲ್ವೇ ಪ್ರಮುಖ ಪಾತ್ರ ವಹಿಸುತ್ತಿರುವ ರೈಲ್ವೆ ಸೇವೆ ಶುರುವಾಗಿ ಬರೋಬ್ಬರಿ 170 ವರ್ಷಗಳಾಗಿವೆ

ರೈಲ್ವೆ ಸಚಿವಾಲಯವು "ಸಾರಿಗೆ ಮತ್ತು ಸಂಪರ್ಕದಲ್ಲಿ ಇಂದು ಹೊಸ ಯುಗ ಪ್ರಾರಂಭವಾಗಿದೆ" ಎಂದು ಟ್ವೀಟ್ ಮಾಡಿತ್ತು. ಪಶ್ಚಿಮ ರೈಲ್ವೇಯ ಅಧಿಕೃತ ಹ್ಯಾಂಡಲ್ 1853 ರಿಂದ, ಭಾರತೀಯ ರೈಲ್ವೇ ಸಾಮಾನ್ಯ ಜನರ ಜೀವನದ ಅವಿಭಾಜ್ಯ ಅಂಗವಾಗಿದೆ ಮತ್ತು ದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಎಂಜಿನ್ ಆಗಿ ಮಾರ್ಪಟ್ಟಿದೆ ಎಂದು ಹೇಳಿದೆ.


ಭಾರತೀಯ ರೈಲ್ವೇಯ ವೈಶಿಷ್ಟ್ಯಗಳು: ಭಾರತದಲ್ಲಿ ರೈಲ್ವೇಗಳ ಅಡಿಪಾಯವನ್ನು ಹಾಕುವಲ್ಲಿ ಜಮ್ಸೆಟ್ಜಿ ಜೀಜೀಭೋಯ್ ಮತ್ತು ಜಗನ್ನಾಥ್ ಸುಂಕರ್ಸೇತ್ ಪ್ರಮುಖ ಪಾತ್ರ ವಹಿಸಿದ್ದಾರೆ. 160 ವರ್ಷಗಳ ಹಿಂದೆ ಈ ಇಬ್ಬರು ಮೊದಲ ರೈಲ್ವೆ ಹಳಿ ನಿರ್ಮಾಣವನ್ನು ಪ್ರಾರಂಭಿಸಿದರು. ದೇಶದಲ್ಲಿ ರೈಲ್ವೇ ಮೂಲಸೌಕರ್ಯವನ್ನು ಉತ್ತೇಜಿಸುವಲ್ಲಿ ಮತ್ತು ಬೆಂಬಲಿಸುವಲ್ಲಿ ಅವರು ಅಗ್ರಗಣ್ಯರಾಗಿದ್ದಾರೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ಭಾರತದ ಅತ್ಯಂತ ವೇಗದ ರೈಲು. ಇದು ಗಂಟೆಗೆ 180 ಕಿಮೀ ವೇಗವನ್ನು ತಲುಪುತ್ತದೆ. ಆದರೆ ಅತ್ಯಂತ ನಿಧಾನವಾದ ರೈಲು ಮೆಟ್ಟುಪಾಳ್ಯಂ-ಊಟಿ ನೀಲಗಿರಿ ಪ್ಯಾಸೆಂಜರ್ ರೈಲು. ಇದು ಕೇವಲ 10 ಕಿ.ಮೀ ವೇಗದಲ್ಲಿ ಚಲಿಸುತ್ತದೆ.

ಭಾರತೀಯ ರೈಲ್ವೇಯು ಪ್ಯಾಲೇಸ್ ಆನ್ ವೀಲ್ಸ್ ಮತ್ತು ಮಹಾರಾಜ ಎಕ್ಸ್‌ಪ್ರೆಸ್‌ನಂತಹ ಐಷಾರಾಮಿ ರೈಲುಗಳನ್ನು ಸಹ ಪರಿಚಯಿಸಿದೆ. ಭಾರತದಾದ್ಯಂತ ಪ್ರಯಾಣಿಸುವಾಗ ಇವು ಪ್ರವಾಸಿಗರಿಗೆ ಅದ್ಭುತ ಅನುಭವವನ್ನು ನೀಡುತ್ತವೆ.

ಮಹಿಳೆಯರಿಗೆ ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣವನ್ನು ಒದಗಿಸಲು, ಭಾರತೀಯ ರೈಲ್ವೆಯು 1992 ರಲ್ಲಿ ಮುಂಬೈನಲ್ಲಿ ಮೊದಲ ಮಹಿಳಾ ಪ್ರತ್ಯೇಕ ರೈಲನ್ನು ಪರಿಚಯಿಸಿತು.

ದೆಹಲಿ ರೈಲು ನಿಲ್ದಾಣವು ವಿಶ್ವದ ಅತಿದೊಡ್ಡ ಮಾರ್ಗ ರಿಲೇ ಇಂಟರ್‌ಲಾಕಿಂಗ್ ವ್ಯವಸ್ಥೆಯನ್ನು ಹೊಂದಿದ್ದು, ಗಿನ್ನೆಸ್ ವಿಶ್ವ ದಾಖಲೆಗಳಲ್ಲಿ ಸ್ಥಾನ ಪಡೆದಿದೆ.

ಭಾರತೀಯ ರೈಲು ನೆಟ್​ವರ್ಕ್​ ಒಟ್ಟು 1,27,760 ಕಿ.ಮೀ. ವರೆಗೆ ವಿಸ್ತರಿಸಿದೆ. ಇದು ವಿಶ್ವದ ಮೂರನೇ ಅತಿ ಉದ್ದದ ರೈಲು ಜಾಲವಾಗಿದೆ.

ವಿವೇಕ್ ಎಕ್ಸ್‌ಪ್ರೆಸ್ 80 ಗಂಟೆ 15 ನಿಮಿಷಗಳ ಅವಧಿಯೊಂದಿಗೆ ಸಂಚರಿಸುವ ಮೂಲಕ ಭಾರತದ ಅತಿ ಉದ್ದದ ರೈಲು ಮಾರ್ಗವಾಗಿ ಇತಿಹಾಸ ನಿರ್ಮಿಸಿದೆ. ಇದು ಎಂಟು ರಾಜ್ಯಗಳ ಮೂಲಕ 4,233 ಕಿಮೀ ದೂರವನ್ನು ಕ್ರಮಿಸುತ್ತದೆ.ವಿವೇಕ್ ಎಕ್ಸ್‌ಪ್ರೆಸ್ 80 ಗಂಟೆ 15 ನಿಮಿಷಗಳ ಅವಧಿಯೊಂದಿಗೆ ಸಂಚರಿಸುವ ಮೂಲಕ ಭಾರತದ ಅತಿ ಉದ್ದದ ರೈಲು ಮಾರ್ಗವಾಗಿ ಇತಿಹಾಸ ನಿರ್ಮಿಸಿದೆ. ಇದು ಎಂಟು ರಾಜ್ಯಗಳ ಮೂಲಕ 4,233 ಕಿಮೀ ದೂರವನ್ನು ಕ್ರಮಿಸುತ್ತದೆ.

ಭಾರತೀಯ ರೈಲ್ವೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯಾದ ಚೆನಾಬ್ ಸೇತುವೆಯನ್ನು ನಿರ್ಮಿಸುತ್ತಿದೆ. ಇದು ಕಾಂಕ್ರೀಟ್ ಕಮಾನು ಸೇತುವೆಯಾಗಿದ್ದು, ಪ್ರಸ್ತುತ ನಿರ್ಮಾಣ ಹಂತದಲ್ಲಿದೆ. ಪೂರ್ಣಗೊಂಡಾಗ, ಸೇತುವೆಯು ಐಫೆಲ್ ಟವರ್‌ಗಿಂತ 35 ಮೀಟರ್ ಎತ್ತರ ಇರಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries