ಉಪ್ಪಿಲ್ಲದ ಊಟ ರುಚಿಸುವುದುಂಟೇ? ಅಡುಗೆಯಲ್ಲಿ ಹಿತ ಮಿತ ಉಪ್ಪು ಇದ್ದರೆ ಮಾತ್ರ ಆ ಅಡುಗೆ ರುಚಿ ಹೆಚ್ಚುವುದು. ಉಪ್ಪು ರುಚಿಗಷ್ಟೇ ಅಲ್ಲ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಆರೋಗ್ಯದ ವಿಷಯಕ್ಕೆ ಯಾವ ಬಗೆಯ ಉಪ್ಪು ಶರೀರಕ್ಕೆ ಒಳ್ಳೆಯದು ಎಂಬ ಪ್ರಶ್ನೆ ಹಲವರಲ್ಲಿರುತ್ತದೆ. ಸಮುದ್ರ ಉಪ್ಪು ಹಾಗೂ ಕಲ್ಲುಪ್ಪು ಈ ಎರಡರಲ್ಲಿ ಯಾವುದು ಹೆಚ್ಚು ಆರೋಗ್ಯಕರ ಎಂದು ನೋಡೋಣ:
ಕಲ್ಲಪ್ಪು ಎಂದರೇನು?
ಕಲ್ಲುಪ್ಪು ಎಂಬುವುದು ಸೋಡಿಯಂ ಕ್ಲೋರೈಡ್ ಆಗಿದ್ದು ನೈಸರ್ಗಿಕವಾಗಿ ಉತ್ಪತ್ತಿಯಾದ
ಉಪ್ಪಿನ ಕಲ್ಲಿನಿಂದ ಕಲ್ಲುಪ್ಪು ತಯಾರಿಸಲಾಗುವುದು. ಈ ಕಲ್ಲುಪ್ಪು ಸಮುದ್ರದದ ಸಮೀಪ
ಇರುತ್ತದೆ. ಕಲ್ಲುಪ್ಪು ಕೂಡ ಸಮುದ್ರದಿಂದ ಸಂಗ್ರಹವಾದ ಉಪ್ಪಿನಂಶವಾಗಿದ್ದು ಘನ
ರೂಪದಲ್ಲಿರುತ್ತದೆ. ಕಲ್ಲುಪ್ಪನ್ನು ಐಸ್ ಕ್ರೀಮ್ ತಯಾರಿಯಲ್ಲಿ ಅಥವಾ ನೀರಿಗೆ ಮೃದುತ್ವ
ತರಲು ಬಳಸಲಾಗುವುದು.
ಸಮುದ್ರ ಉಪ್ಪು ಎಂದರೇನು?
ಇದನ್ನು ಸಮುದ್ರದ ಉಪ್ಪಿನಂಶದ ನೀರನ್ನು ಸಂಗ್ರಹಿಸಿ ಅದನ್ನು ಆವಿಯಾಗುವಂತೆ ಮಾಡಿ ಉಪ್ಪನ್ನು ಸಂಗ್ರಹಿಸಲಾಗುವುದು.
ಕಲ್ಲುಪ್ಪು vs ಸಮುದ್ರ ಉಪ್ಪು
ಈ ಎರಡು ಉಪ್ಪು ಒಂದೇ ಎಂದು ನೋಡಿದರೆ ಎರಡರಲ್ಲಿರುವ ಪೋಷಕಾಂಶಗಳು ಒಂದೇ ರೀತಿದೆ, ಆದರೆ
ಉಪ್ಪು ತಯಾರಾದ ವಿಧಾನ ಮಾತ್ರ ಭಿನ್ನವಾಗಿದೆ. ಕಲ್ಲುಪ್ಪು ನೈಸರ್ಗಿಕವಾಗಿ ಉಂಟಾದರೆ
ಸಮುದ್ರ ಉಪ್ಪನ್ನು ಉಪ್ಪು ನೀರು ಆವಿಯಾದಾಗ ಉಂಟಾಗುವುದು. ಈ ಎರಡು ಉಪ್ಪುನ
ತರಿತರಿಯಾಗಿರುತ್ತದೆ. ಅಯೋಡಿಯನ್ ಸೇರಿಸಿರುವ ಉಪ್ಪು ಮಾತ್ರ ನುಣ್ಣನೆ ಇರುತ್ತದೆ,
ಈ ಎರಡೂ ಉಪ್ಪಿನಲ್ಲಿ ಸತು, ತಾಮ್ರದಂಶ, ಕಬ್ಬಿಣದಂಶ, ಮ್ಯಾಂಗನೀಸ್, ಪೊಟಾಷ್ಯಿಯಂ, ಕ್ಯಾಲ್ಸಿಯಂ ಅಲ್ಪ ಪ್ರಮಾಣದಲ್ಲಿರುವುದರಿಂದ ಈ ಎರಡೂ ಉಪ್ಪಿನಂಶ ಪೋಷಕಾಂಶದಲ್ಲಿ ದೊಡ್ಡ ವ್ಯತ್ಯಾಸವೇನೂ ಇರುವುದಿಲ್ಲ.
ಅಯೋಡಿಯನ್ ಉಪ್ಪು ಹೇಗೆ ತಯಾರಿಸಲಾಗುವುದು?
ಕಲ್ಲುಪ್ಪು ಅಥವಾ ಸಮುದ್ರ ಉಪ್ಪಿನಿಂದಲೇ ಅಯೋಡಿಯನ್ ಇರುವ ಉಪ್ಪು ತಯಾರಿಸಲಾಗುವುದು.
ಇದರಲ್ಲಿ ಖನಿಜಾಣಶಗಳನ್ನು ತೆಗೆಯಲಾಗುವುದು, ಇದರಲ್ಲಿ ಸೋಡಿಯಂ ಕ್ಲೋರೈಡ್ ಮಾತ್ರ
ಇರುತ್ತದೆ.
ಮಾರುಕಟ್ಟೆಯಲ್ಲಿ ದೊರೆಯುವ ಉಪ್ಪಿನ ವಿಧಗಳು
ನಿಮಗೆ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಉಪ್ಪು ದೊರೆಯುತ್ತದೆ
* ಕಲ್ಲುಪ್ಪು
* ಸಮುದ್ರ ಉಪ್ಪು
* ಅಯೋಡಿಯನ್ ಇರುವ ಉಪ್ಪು
* ಹಿಮಾಲಯನ್ ಪಿಂಕ್ ಉಪ್ಪು
* ಸೆಲ್ಟಿಕ್ ಉಪ್ಪು
* ಬ್ಲ್ಯಾಕ್ ಸಾಲ್ಟ್
ಹೀಗೆ ನಿಮಗೆ ಹಲವು ವಿಧದ ಉಪ್ಪು ದೊರೆಯುತ್ತದೆ. ಈ ಎಲ್ಲಾ ಉಪ್ಪುಗಳ ಗುಣಗಳು ಒಂದೇ
ಆಗಿರುವುದರಿಂದ ಒಂದಕ್ಕಿಂತ ಮತ್ತೊಂದು ಮಿಗಿಲು ಎಂದು ಹೇಳಲಾಗುವುದಿಲ್ಲ. ಎಲ್ಲಾ
ಉಪ್ಪಿನಲ್ಲಿ ಸೋಡಿಯಂ ಒಂದೇ ಪ್ರಮಾಣದಲ್ಲಿ ಇರುತ್ತದೆ.
ಆದ್ದರಿಂದ ಅಡುಗೆಗೆ ನಿಮಗೆ ಇಷ್ಟವಾಗುವ ಉಪ್ಪು ಬಳಸಬಹುದು. ಈ ಉಪ್ಪು ತುಂಬಾ ಆರೋಗ್ಯಕರ ,
ಇದು ಕಡಿಮೆ ಆರೋಗ್ಯಕರ ಎಂದೇನಿಲ್ಲ, ಉಪ್ಪನ್ನು ಮಿತಿಯಲ್ಲಿ ಸೇವಿಸಿ ಅದುವೇ ಆರೋಗ್ಯಕರ.