HEALTH TIPS

XBB.1.16 ಜಾಗ್ರತೆ ವಹಿಸಬೇಕಾದ ಕೋವಿಡ್ ರೂಪಾಂತರ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

                 ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ಇನ್ನೂ ಸಕ್ರಿಯವಾಗಿದ್ದು, ಪ್ರಸ್ತುತ ಕೋವಿಡ್-19 ನ XBB.1.16 ಜಾಗ್ರತೆ ವಹಿಸಬೇಕಾದ ಕೋವಿಡ್ ರೂಪಾಂತರವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

                      ಜಾಗತಿಕವಾಗಿ ಕೋವಿಡ್ -19 ಪ್ರಕರಣಗಳು ಹೆಚ್ಚಾಗುತ್ತಿದ್ದು, ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 12,193 ಹೊಸ ಕೋವಿಡ್ -19 ಸೋಂಕು ಪ್ರಕರಣಗಳು ಮತ್ತು 42 ಸಾವುಗಳು ದಾಖಲಾಗಿವೆ. WHO Omicron ಉಪ ರೂಪಾಂತರ XBB.1.16 ಜಾಗ್ರತೆ ವಹಿಸಬೇಕಾದ ರೂಪಾಂತರ ವೈರಸ್ ಎಂದು ಘೋಷಣೆ ಮಾಡಿದೆ. ಇದೇ ರೂಪಾಂತರ ಭಾರತದಲ್ಲಿ ಕೋವಿಡ್ -19 ಉಲ್ಬಣಕ್ಕೆ ಚಾಲನೆ ನೀಡುತ್ತಿದೆ. ಅಮೆರಿಕ ಸೇರಿದಂತೆ 31 ದೇಶಗಳಲ್ಲಿ ಕೋವಿಡ್ ಸೋಂಕು ಉಲ್ಪಣವಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
                 XBB.1.16 ರೂಪಾಂತರ XBBಯ ವಂಶಾವಳಿಯಾಗಿದ್ದು, ಇದು ಎರಡು BA.2 ಸಂತತಿ ವಂಶಾವಳಿಗಳ ಮರುಸಂಯೋಜಕವಾಗಿದೆ. XBB.1.16 ಅನ್ನು ಈ ವರ್ಷದ ಜನವರಿ 9 ರಂದು ಮೊದಲ ಬಾರಿಗೆ ವರದಿ ಮಾಡಲಾಗಿತ್ತು. ಮಾರ್ಚ್ 22 ರಂದು ಮೇಲ್ವಿಚಾರಣೆಯಲ್ಲಿರುವ ರೂಪಾಂತರ ವೈರಸ್ (VUM) ಎಂದು ಗೊತ್ತುಪಡಿಸಲಾಗಿದೆ. "XBB.1.16 ಹರಡುವಿಕೆಯಲ್ಲಿ ನಿರಂತರ ಹೆಚ್ಚಳ ಮತ್ತು ಹಲವಾರು ದೇಶಗಳಿಂದ ವರದಿಯಾದ ಬೆಳವಣಿಗೆಯ ವರದಿಯನ್ನು ಅನುಸರಿಸಿ, ವಿಶ್ವ ಆರೋಗ್ಯ ಸಂಸ್ಥೆ XBB.1.16 ಅನ್ನು VOI ನಲ್ಲಿ ವರ್ಗೀಕರಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್-19 ಪ್ರತಿಕ್ರಿಯೆಯ ತಾಂತ್ರಿಕ ಪ್ರಮುಖರಾದ ಮಾರಿಯಾ ವ್ಯಾನ್ ಕೆರ್ಕೋವ್ ಹೇಳಿದ್ದಾರೆ. ಮಾರ್ಚ್ನಲ್ಲಿ ಮಹಾರಾಷ್ಟ್ರದಲ್ಲಿ ಮೊದಲು ಪತ್ತೆಯಾದ XBB.1.16, ರೋಗ ನಿರೋಧಕಕ್ಕೆ ಪ್ರತಿರೋಧ ಮತ್ತು ವೇಗದ ಪ್ರಸರಣದ ಸಾಮರ್ಥ್ಯವನ್ನು ಹೊಂದಿದೆ. ತೀವ್ರತೆಯಲ್ಲಿ ಯಾವುದೇ ಬದಲಾವಣೆಗಳು ವರದಿಯಾಗಿಲ್ಲ, ಇದು ಸಂಪೂರ್ಣ ಶ್ರೇಣಿಯ ರೋಗಗಳಿಗೆ ಕಾರಣವಾಗಬಹುದು.
                        Omicron XBB.1.16 ರೂಪಾಂತರದ 3,648 ಅನುಕ್ರಮಗಳನ್ನು ಭಾರತ ಸೇರಿದಂತೆ 33 ದೇಶಗಳಿಂದ ಜಾಗತಿಕ ಆರೋಗ್ಯ ಸಂಸ್ಥೆಯಾದ GISAID ಮುಕ್ತ ಸಂಶೋಧನಾ ವೇದಿಕೆಯಲ್ಲಿ ವರದಿ ಮಾಡಲಾಗಿದೆ. ಆದರೂ, ಭಾರತ ಮತ್ತು ಇಂಡೋನೇಷ್ಯಾದಲ್ಲಿ ಆಸ್ಪತ್ರೆಗೆ ದಾಖಸಲಾಗುತ್ತಿರುವ XBB.1.16-ಸಂಬಂಧಿತ ರೋಗಿಗಳ ಸಂಖ್ಯೆಯಲ್ಲಿ "ಸ್ವಲ್ಪ ಹೆಚ್ಚಳ" ಕಂಡುಬಂದರೂ, ಈ ಮಟ್ಟಗಳು "ಹಿಂದಿನ ರೂಪಾಂತರದ ಅಲೆಗಳಲ್ಲಿ ಕಂಡುಬಂದಕ್ಕಿಂತ ಕಡಿಮೆ ಎಂದು WHO ಹೇಳಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 12,193 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ, ಇದು ಹಿಂದಿನ ದಿನಕ್ಕಿಂತ 4.28 ಶೇಕಡಾ ಹೆಚ್ಚಳವಾಗಿದ್ದು, ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 67,556 ಕ್ಕೆ ಏರಿದೆ. ಕೋವಿಡ್ -19 ಪ್ರಕರಣಗಳು ಮತ್ತು ಸಾವುಗಳು ಹೆಚ್ಚಾಗುತ್ತಿದ್ದಂತೆ, ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಎಂಟು ರಾಜ್ಯಗಳಿಗೆ ಪತ್ರ ಬರೆದಿದ್ದು, ಕೇರಳ, ಕರ್ನಾಟಕ, ಹರಿಯಾಣ, ದೆಹಲಿ, ಮಹಾರಾಷ್ಟ್ರ, ಉತ್ತರ ಪ್ರದೇಶ, ತಮಿಳುನಾಡು ಮತ್ತು ರಾಜಸ್ಥಾನ ರಾಜ್ಯಗಳಿಗೆ ಪತ್ರ ಬರೆದಿದ್ದು, ಸಾಂಕ್ರಾಮಿಕ ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸುವುದು ನಿರ್ಣಾಯಕವಾಗಿದೆ ಎಂದು ಹೇಳಿದೆ.

                     ಸಚಿವಾಲಯದ ಪ್ರಕಾರ, ಏಪ್ರಿಲ್ 19 ಕ್ಕೆ ಕೊನೆಗೊಳ್ಳುವ ವಾರದಲ್ಲಿ ದೇಶದ 63 ಜಿಲ್ಲೆಗಳು ಶೇಕಡಾ 10 ಕ್ಕಿಂತ ಹೆಚ್ಚು ಸಕಾರಾತ್ಮಕ ದರವನ್ನು ದಾಖಲಿಸುತ್ತಿದ್ದರೆ, 42 ಜಿಲ್ಲೆಗಳು ಅದೇ ಅವಧಿಯಲ್ಲಿ ಶೇಕಡಾ 5-10 ರ ನಡುವೆ ಧನಾತ್ಮಕ ದರವನ್ನು ದಾಖಲಿಸಿವೆ. ಕೇರಳದಲ್ಲಿ 14 ಜಿಲ್ಲೆಗಳು ಶೇಕಡಾ 10 ಕ್ಕಿಂತ ಹೆಚ್ಚು ಧನಾತ್ಮಕತೆಯನ್ನು ದಾಖಲಿಸುತ್ತಿವೆ. ತಮಿಳುನಾಡಿನಲ್ಲಿ, 11 ಜಿಲ್ಲೆಗಳು ಒಂದೇ ಸಂಖ್ಯೆಯ ಸೋಂಕು ಸಕಾರಾತ್ಮಕತೆಯನ್ನು ದಾಖಲಿಸಿವೆ. ಆದಾಗ್ಯೂ, ಈ ಎಂಟು ರಾಜ್ಯಗಳ ಹೊರತಾಗಿ, ಇತರ ರಾಜ್ಯಗಳು ಹೊಸ ಸೋಂಕುಗಳ ಹೆಚ್ಚಳವನ್ನು ವರದಿ ಮಾಡಿದೆ ಎಂದು ತಜ್ಞರು ಹೇಳಿದ್ದಾರೆ. ರಾಜ್ಯಗಳ ಪೈಕಿ - ಮಧ್ಯಪ್ರದೇಶ, ಹಿಂದಿನ ದಿನಕ್ಕಿಂತ ಶೇಕಡಾ 60 ರಷ್ಟು ಹೆಚ್ಚಳವನ್ನು ವರದಿ ಮಾಡಿದೆ. ಕೋವಿಡ್ ಡೇಟಾ ವಿಶ್ಲೇಷಕರಾದ ಕೃಷ್ಣ ಪ್ರಸಾದ್ ಎನ್ ಸಿ ಪ್ರಕಾರ ಹೆಚ್ಚು ಸೋಂಕು ದಾಖಲಾಗುತ್ತಿರುವ ರಾಜ್ಯಗಳೆಂದರೆ ಕರ್ನಾಟಕ (25%), ಪಶ್ಚಿಮ ಬಂಗಾಳ 23%), ಒಡಿಶಾ (13), ಮತ್ತು ಚಂಡೀಗಢ (11%).

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries