ಶ್ರೀಹರಿಕೋಟ : ನೌಕೆಗಳ ಸಂಚಾರ ನಿರ್ಧರಿಸಲು ನೆರವಾಗುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) 'ಎನ್‌ವಿಎಸ್-01' ನ್ಯಾವಿಗೇಷನ್ ಉಪಗ್ರಹ ಉಡಾವಣೆಗೆ ಕ್ಷಣಗಣೆ ಆರಂಭವಾಗಿದೆ.
ಶ್ರೀಹರಿಕೋಟ : ನೌಕೆಗಳ ಸಂಚಾರ ನಿರ್ಧರಿಸಲು ನೆರವಾಗುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) 'ಎನ್‌ವಿಎಸ್-01' ನ್ಯಾವಿಗೇಷನ್ ಉಪಗ್ರಹ ಉಡಾವಣೆಗೆ ಕ್ಷಣಗಣೆ ಆರಂಭವಾಗಿದೆ.
ಸೋಮವಾರ (ಮೇ 29) ಬೆಳಿಗ್ಗೆ 10.42ಕ್ಕೆ ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡ್ಡಯನ ನೆಲೆಯಿಂದ 2,232 ಕೆ.ಜಿ ತೂಕದ ಈ ಉಪಗ್ರಹ (ಎನ್‌ವಿಎಸ್ -01) ಹೊತ್ತ ರಾಕೆಟ್ 'ಜಿಎಸ್‌ಎಲ್‌ವಿ-ಎಫ್12' ನಭಕ್ಕೆ ಚಿಮ್ಮಲಿದೆ.
ಭಾನುವಾರ ಬೆಳಿಗ್ಗೆ 7.12ಕ್ಕೆ ಉಪಗ್ರಹ ಹೊತ್ತ ರಾಕೆಟ್‌ನ ಲಿಫ್ಟ್ ಆಫ್ ಪ್ರಕ್ರಿಯೆ ಶುರು ಮಾಡುವ ಮೂಲಕ ಇಸ್ರೊ ವಿಜ್ಞಾನಿಗಳು ಉಡಾವಣೆಗೆ ಕ್ಷಣಗಣನೆ ಆರಂಭಿಸಿದರು. ರಾಕೆಟ್ ಉಡಾವಣೆಯಾದ 20 ನಿಮಿಷಗಳ ಅವಧಿಯಲ್ಲಿ, 251 ಕಿಲೋ ಮೀಟರ್ ಎತ್ತರದ ಭೂಕಕ್ಷೆಗೆ ಉಪಗ್ರಹವನ್ನು ಸೇರಿಸುವಂತೆ ಯೋಜನೆ ರೂಪಿಸಲಾಗಿದೆ ಎಂದು ಇಸ್ರೊ ತಿಳಿಸಿದೆ.
ಈ ಉಪಗ್ರಹವು, ಭಾರತ ಮತ್ತು ಮುಖ್ಯ ಭೂಭಾಗದ ಸುತ್ತಲಿನ ಸುಮಾರು 1,500 ಕಿ.ಮೀ.ವರೆಗಿನ ಪ್ರದೇಶದ ನಿಖರ ಸ್ಥಳ ಮತ್ತು ನೈಜ ಸಮಯದ ಸೇವೆಗಳನ್ನು ಒದಗಿಸಲಿದೆ ಎಂದು ಹೇಳಿದೆ.